ಮಾಜಿ ಸಚಿವ ವಿನಯ ಕುಲಕರ್ಣಿ ಅವರಿಗೆ ಇಂದು 53 ನೇ ಜನ್ಮ ದಿನಾಚರಣೆ.ಈ ಬಾರಿ ಬರ್ತಡೆಯನ್ನು ಮಾಜಿ ಸಚಿವರು ಸರಳವಾಗಿ ಆಚರಣೆ ಮಾಡಿಕೊಳ್ಳುತ್ತಿದ್ದಾರೆ.
ವಿನಯ್ ಅವರ ಅಭಿಮಾನಿಗಳು ಹಾಗೂ ಆತ್ಮೀಯರು ಆಗಿರುವ ಕೆಪಿಸಿಸಿ ಅಲ್ಪಸಂಖ್ಯಾತರ ವಿಭಾಗದ ರಾಜ್ಯ ಉಪಾಧ್ಯಕ್ಷ ಇಮ್ರಾನ್ ಕಳ್ಳಿಮನಿ ಹಾಗೂ ಕಾಂಗ್ರೆಸ್ ಮುಖಂಡ ಮನೋಹರ ಪವಾರ್ (ಪಾಪು) ಇಬ್ಬರು ಕೂಡಿಕೊಂಡು ವೃದ್ಧಾಶ್ರಮದಲ್ಲಿ ಅರ್ಥಪೂರ್ಣವಾಗಿ ಬರ್ತಡೆ ಆಚರಣೆ ಮಾಡಿದ್ರು. ಇಂದು ಧಾರವಾಡದ ಮಾಳಮಡ್ಡಿಯಲ್ಲಿರುವ ಮಹರ್ಶಿ ಉತ್ತರಾಶ್ರಮದವೃದ್ಧಾಶ್ರಮದಲ್ಲಿ 50 ಮಂದಿ ಹಿರಿಯರಿಗೆಲ್ಲಾ ಅನ್ನಸಂತರ್ಪಣೆ ಮಾಡಿ , ಕೇಕ್ ಕಟ್ ಮಾಡಿ ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಬರ್ತಡೆ ಆಚರಣೆ ಮಾಡಲಾಯಿತು.