ಸ್ಥಳೀಯ ಸುದ್ದಿ
ವೃತ್ತಿಯೇ ಉಸಿರಾಗಿಸಿಕೊಂಡಿರುವ ಪತ್ರಕರ್ತನ ವಿಶೇಷ ಮದುವೆ ಆಮಂತ್ರಣ
ಧಾರವಾಡ
ಜಿಲ್ಲೆಯಲ್ಲಿ ವಿಭಿನ್ನ ಹಾಗೂ ಹೊಸತನದ ಮೂಲಕ ಹೊಸ ವಾಹಿನಿ ವಿಸ್ತಾರ ನ್ಯೂಸ್ ವರದಿಗಾರರಾಗಿ ಕೆಲಸ ಮಾಡುತ್ತಿರುವ ಶ್ರೀಧರ ಮುಂಡರಗಿ ಅವರು ತಮ್ಮ ಆಲೋಚನೆ ಹಾಗೂ ವಿಭಿನ್ನ ಮದುವೆ ಆಮಂತ್ರಣದ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ.
ಧಾರವಾಡ ಜಿಲ್ಲೆಯ ಅಣ್ಣಿಗೇರಿ ಪಟ್ಟಣದ ಶ್ರೀಧರ ಮುಂಡರಗಿ ಅವರ ಮದುವೆ ಆಮಂತ್ರಣ ಬಹಳಷ್ಟು ವಿಭಿನ್ನ ಹಾಗೂ ಹೊಸತನದಿಂದ ಕೂಡಿದೆ.
ಟಿವಿ ಮಾಧ್ಯಮದ ಪರದೆಯ ರೀತಿಯಲ್ಲಿ ಈ ಆಮಂತ್ರಣ ರೆಡಿಯಾಗಿದ್ದು, ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಇದೇ ಫೆ. 12 ಕ್ಕೆ ಗದಗ ಜಿಲ್ಲೆಯ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನದಲ್ಲಿ ನಡೆಯಲಿದೆ.