ಧಾರವಾಡ
ರೋಗಿಗಳ ಸಂಬಂಧಿಕರಿಗೆ ಒಂದು ನ್ಯಾಯ- ಇವರಿಗೊಂದು ನ್ಯಾಯ- ಎಲ್ಲಿದೆಯೋ ನ್ಯಾಯ ಎನ್ನುತ್ತಿದ್ದಾರೆ ಸಾರ್ವಜನಿಕರು
ಧಾರವಾಡ
ಹೊಳೆಯಲ್ಲಿ ಹುಣಸೆ ಹಣ್ಣು ತೊಳದಂಗೆ ಎನ್ನುವ ಗಾದೆ ಮಾತು ಎಲ್ಲರಿಗೂ ಗೊತ್ತು.
ಇಂತಹ ಗಾದೆ ಮಾತು ಇಲ್ಲಿ ಸತ್ಯವಾದಂತೆ ಕಾಣುತ್ತಿದೆ..
ಧಾರವಾಡದ ಕೊರೊನಾ ಹಾಟಸ್ಪಾಟ್ ಆಗಿ ಎಲ್ಲರ ಗಮನ ಸೆಳೆದು ಇದೀಗ ಸ್ವಲ್ಪ ಮಟ್ಟಿಗೆ ರಿಲ್ಯಾಕ್ಸ ಆಗ್ತಾ ಇದೆ ಎನ್ನುವಾಗಲೇ ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂಗೆ ಆಗಿದೆ ಇಲ್ಲಿನ ಪರಿಸ್ಥಿತಿ.
ಎಸ್ ಡಿಎಂ ಸುತ್ತಲಿನ 500 ಮೀಟರ್ ವ್ಯಾಪ್ತಿಯಲ್ಲಿ ಶಾಲೆ- ಕಾಲೇಜು ಬಂದ್ ಮಾಡಿ ಜಿಲ್ಲಾಡಳಿತ ಆದೇಶ ಮಾಡಿದೆ.
ಆದ್ರೆ ವಿಐಪಿಗಳ ಮದುವೆಗೆ ಇದು ಅನ್ವಯಿಸುದಿಲ್ವಾ?
ಎನ್ನುವ ಮಾತುಗಳು ಇದೀಗ ಕೇಳಿ ಬರುತ್ತಿವೆ.
ಏಕೆಂದ್ರೆ ಯಾವ ಕೊರೊನಾ ಹೆಚ್ಚಾಗಲು ಕಾರಣವಾಗಿದ್ದ ಕಲಾಕ್ಷೇತ್ರದಲ್ಲಿ ಇದೀಗ ಮದುವೆ ಸಮಾರಂಭ ನಡೆಯುತ್ತಿದೆ.
ಇಷ್ಟೆಲ್ಲಾ ಗೊಂದಲದ ನಡುವೆ
ಈ ಮದುವೆ ಪರವಾನಿಗೆ ಎಸ್ ಡಿಎಂ ಆಡಳಿತ ಮಂಡಳಿ ಕೊಟ್ಟಿತ್ತಾ? ಅಥವಾ ಧಾರವಾಡ ಜಿಲ್ಲಾಡಳಿತ ಕೊಟ್ಟಿತಾ? ಎನ್ನುವುದು ಸಾರ್ವಜನಿಕರಲ್ಲಿ ಪ್ರಶ್ನೆ ಮೂಡಿದೆ.