ರಾಜ್ಯದ ಮೂಲೆ ಮೂಲೆಗಳಿಂದ ವಿಜಯಪುರಕ್ಕೆ ಬರುತ್ತಿರುವ ಭಕ್ತರು
ವಿಜಯಪುರ
ಶ್ರೀ ಸಿದ್ದೇಶ್ವರ ಸ್ವಾಮಿಗಳ ಜ್ಞಾನಯೋಗಾಶ್ರಮಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಸಾವಿರಾರು ಭಕ್ತರು ಆಗಮಿಸುತ್ತಿದ್ದಾರೆ.
ನಿನ್ಮೆಯಷ್ಟೇ ಶ್ರೀಗಳ ಅಂತ್ಯಕ್ರೀಯೆ ವಿಜಯಪುರದ ಆಶ್ರಮದಲ್ಲಿ ನಡೆದಿತ್ತು.
ಇದರ ಜೋತೆಗೆ ಚಿತಾಭಸ್ಮದ ದರ್ಶನ ಪಡೆಯುವವರಿಗೆ ಆಶ್ರಮದಲ್ಲಿ ವ್ಯವಸ್ಥೆ ಮಾಡಿದ್ದು, ಭಸ್ಮವನ್ನು ಮನೆಗೆ ತೆಗೆದುಕೊಂಡು ಹೋಗುವವರಿಗೆ ಯಾರಿಗೂ ಕೂಡ ಪೊಲೀಸರು ಅವಕಾಶ ಕೊಡುತ್ತಿಲ್ಲಾ.
ಎರಡು ದಿನದಲ್ಲಿ ನಡೆದಾಡುವ ದೇವರು ಸಿದ್ಧೇಶ್ವರ ಶ್ರೀಗಳ ಅಸ್ಥಿ ವಿಸರ್ಜನೆ ನಡೆಯಲಿದೆ ಎಂದು ವಿಜಯಪುರದ ಜ್ಞಾನಯೋಗಾಶ್ರಮದ ಅಧ್ಯಕ್ಷ ಬಸವಲಿಂಗ ಸ್ವಾಮಿಜಿ ಬುಧವಾರ ಹೇಳಿದರು.
ನಗರದಲ್ಲಿ ಮಾತನಾಡಿದ ಅವರು, ಶ್ರೀಗಳ ಮುಂದಿನ ಕಾರ್ಯಗಳ ಬಗ್ಗೆ ಚರ್ಚೆ ನಡೆಸಿ ನಿರ್ಧರಿಸುತ್ತೇವೆ. ಶ್ರೀಗಳ ಚಿತೆಗೆ ಹಾಲು, ನೀರು ಹಾಕಿ ಮಂತ್ರಗಳ ಮೂಲಕ ಪೂಜೆ ಸಲ್ಲಿಸಲಾಗುತ್ತದೆ. ನಂತರ ಶ್ರೀಗಳ ಚಿತಾ ಭಸ್ಮ ಎಲ್ಲಿ ಹೇಗೆ ವಿಸರ್ಜಿಸುವುದು ಎಂದು ನಿರ್ಧಾರ ಮಾಡ್ತೇವಿ ಎಂದರು.
ಆದ್ರೇ ಭಕ್ತರಿಗೆ ಪೂಜ್ಯರ ಚಿತಾ ಭಸ್ಮ ಕೊಡಲ್ಲ. ಭಕ್ತರು ವಿಭೂತಿ ಪಡೆದುಕೊಂಡು ಅದನ್ನು ಚಿತಾ ಭಸ್ಮದ ಹತ್ತಿರ ಇಟ್ಟು ಅದನ್ನು ಮನೆಗೆ ಕೊಂಡೊಯ್ಯಬೇಕು. ಅದನ್ನು ಪೂಜೆ ಮಾಡಬೇಕು ಎಂದರು.
ದೇಶದ 5 ಕಡೆಗಳಲ್ಲಿ 1 ಸರೋವರ ಹಾಗೂ 4 ನದಿಗಳಲ್ಲಿ ಚಿತಾಭಸ್ಮವನ್ನು ವಿಸರ್ಜನೆ ಮಾಡಲಾಗುತ್ತಿದೆ.
ಶ್ರೀಗಳ ಅಂತ್ಯಕ್ರಿಯೆಯಲ್ಲಿ ಒಟ್ಟು 25 ಲಕ್ಷ ಭಕ್ತರು ಪಾಲ್ಗೊಂಡಿದ್ದರು ಎಂದು ಆಶ್ರಮದ ಮುಂದೆ ಅಂಗಡಿ ಇಟ್ಟುಕೊಂಡಿದ್ದ ಭಕ್ತರೊಬ್ಬರು ಹೇಳಿದ್ರು.
ಇನ್ನು ಆಶ್ರಮದ ಹೊರಗಡೆ ಭಕ್ತಾದಿಗಳು ಸಿದ್ದೇಶ್ವರ ಸ್ವಾಮೀಜಿಗಳ ಫೋಟೊ ಪಡೆದುಕೊಂಡು ಮನೆಗೆ ತೆರಳುತ್ತಿದ್ದಾರೆ.