ರಾಜ್ಯದ ಪೊಲೀಸ ಇಲಾಖೆಯಲ್ಲಿ ಆ ದೊಡ್ಡ ಬದಲಾವಣೆ ಮಾಡುತ್ತಾರಾ? ಜನಪ್ರೀಯ ಸಿಎಂ ಬೊಮ್ಮಾಯಿ
ಧಾರವಾಡ
ಸಿಎಂ ಬಸವರಾಜ ಬೊಮ್ಮಾಯಿ ಉತ್ತರಕರ್ನಾಟಕ ಭಾಗದವರಾಗಿದ್ದು, ಅಪಾರ ರಾಜಕೀಯ ಜ್ಞಾನವನ್ನು ಹೊಂದಿ, ಗೃಹ ಸಚಿವರಾಗಿ, ರಾಜ್ಯದ ಸಿಎಂ ಆಗಿ ಪಾರದರ್ಶಕ ಆಡಳಿತ
ಕೊಡುತ್ತಿದ್ದಾರೆ.
ಗಂಡು ಮೆಟ್ಟಿದ ಹೆಮ್ಮೆಯ ನಾಡು ಹುಬ್ಬಳ್ಳಿ ಮೂಲದ ಸಿಎಂ ತವರು ಜಿಲ್ಲೆ ಧಾರವಾಡ ಕೂಡ ಹೌದು. ಇಂತಹ ಸಿಎಂ ಬಸವರಾಜ ಬೊಮ್ಮಾಯಿ ಮುಂದೆ ಒಂದು ದೊಡ್ಡ ಸವಾಲು ಇದೆ.
ಈ ಸವಾಲು ಎಂತಹದ್ದು ಎಂದ್ರೆ, ಸಿಎಂ ಕೆಲಸ ಮಾಡಿರುವ ಗೃಹ ಇಲಾಖೆಗೆ ಸಂಬAಧಿಸಿದ್ದಾಗಿದೆ. ಅದುವೇ ಪೊಲೀಸರ ಕುಟುಂಬಕ್ಕೆ ಇರುವ ಆರೋಗ್ಯ ಭಾಗ್ಯದ ಗೊಂದಲದ ಸವಾಲು.
ಪೊಲೀಸ್ ಇಲಾಖೆಯಲ್ಲಿ ಸರ್ಕಾರ ಆರೋಗ್ಯ ಭಾಗ್ಯ ಯೋಜನೆ ಜಾರಿಗೆ ತಂದಿದೆ. ಈ ಆರೋಗ್ಯ ಭಾಗ್ಯದ ಯೋಜನೆ ವ್ಯಾಪ್ತಿಯಲ್ಲಿ ಕೆಲವು ಗೊಂದಲಗಳಿವೆ.
ಅದು ಏನೆಂದ್ರೆ, ಆರೋಗ್ಯ ಭಾಗ್ಯದ ವ್ಯಾಪ್ಯಿಯಲ್ಲಿ ಬರುವ ಆಸ್ಪತ್ರೆಗಳಲ್ಲಿ ಪೊಲೀಸರ ಕುಟುಂಬದವರು ತೋರಿಸಿದ್ರೆ, ಆಸ್ಪತ್ರೆಯ ವೆಚ್ಚ ೪ ಲಕ್ಷದವರೆಗೂ ಮಾತ್ರ ಅನ್ವಯವಾಗುತ್ತದೆ. ಅದಕ್ಕಿಂತ ಹೆಚ್ಚು ವೆಚ್ಚವಾದ್ರೆ, ಅದನ್ನು ಪೊಲೀಸರು ಕೈಯಿಂದ ಭರಿಸಿಬೇಕಾಗುತ್ತದೆ.
ಪವರ್ ಸಿಟಿ ನ್ಯೂಸ್ ಕನ್ನಡ ಒಂದಿಷ್ಟು ಆರೋಗ್ಯ ಭಾಗ್ಯದ ಯೋಜನೆ ಸಮಸ್ಯೆ ಅನುಭವಿಸಿದವರ ಜೋತೆಗೆ ಮಾತಾಡಿದಾಗ ಅವರು ಹೇಳಿದ್ದು ಇಷ್ಟು.
ನನ್ನ ಮಗನಿಗೆ ಇದೀಗ ೨೧ ವರ್ಷ ವಯಸ್ಸು, ಆತನಿಗೆ ಮುಂದಿನ ದಿನಗಳಲ್ಲಿ ಏನಾದ್ರೂ ಚಿಕೆತ್ಸೆ ಬೇಕಾದ್ರೆ ದೊಡ್ಡ ಆಸ್ಪತ್ರೆಗೆ ಹೋಗಬೇಕು. ಆಗ ಆರೋಗ್ಯ ಭಾಗ್ಯ
ಅನ್ವಯವಾಗೊದಿಲ್ಲಾ ಅಂತಾರೆ ಪೊಲೀಸ್ ಕುಟುಂಬದವರು.
ಇನ್ನೊಬ್ಬರು ನನ್ನ ಮಗನಿಗೆ ೩೧ ವರ್ಷ. ಅವನಿಗೆ ಆಸ್ಪತ್ರೆಗೆ ತೋರಿಸಿದಾಗ ಆರೋಗ್ಯ ಭಾಗ್ಯದ ಯೋಜನೆ ಅನ್ವಯವಾಗೊದಿಲ್ಲಾ ಅಂದಿದ್ದಾರೆ. ಆರೋಗ್ಯ ಭಾಗ್ಯ ಯೋಜನೆ ಇದ್ದರು, ಅದರಲ್ಲಿ ಚಿಕೆತ್ಸೆ ಕೊಡಿಸಲು ಆಗಲಿಲ್ಲಾ ಎಂದು ಬೇಸರ ವ್ಯಕ್ತಪಡಿಸಿದ್ರು.
ಪೊಲೀಸರ ಪ್ರತಿ ತಿಂಗಳ ವೇತನದಲ್ಲಿ ಆರೋಗ್ಯದ ಭಾಗ್ಯದ ಯೋಜನೆಗಾಗಿ ಒಂದುಷ್ಟು ಹಣವನ್ನು ಖಡಿತ ಮಾಡಿದ್ರೆ ಮುಂದಿನ ದಿನಗಳಲ್ಲಿ ಇದು ನಮಗೆಲ್ಲಾ ಅನ್ವಯವಾಗುತ್ತದೆ. ಹೀಗಾಗಿ ೨೧ ವಯಸ್ಸಿನ ಮೀತಿಯನ್ನು ಮೊದಲು ನಿರ್ಬಂಧಗೊಳಿಸಬೇಕು ಅಂತಾರೆ ಪೊಲೀಸ್ ಕುಟುಂಬದವರು.
ಇನ್ನು ಪೊಲೀಸರ ಮಕ್ಕಳು ಯಾವುದೋ ಒಂದು ಚಿಕೆತ್ಸೆಗಾಗಿ ಆಸ್ಪತ್ರೆಗೆ ದಾಖಲಾದ್ರೆ ೨೧ ವರ್ಷದೊಳಗಿನವರಿರಬೇಕು.
ಅಂದಾಗ ಮಾತ್ರ ಯೋಜನೆ ಅನ್ವಯವಾಗುತ್ತೆ. ೨೧ ವರ್ಷ ದಾಟಿದ್ರೆ ಈ ಆರೋಗ್ಯ ಭಾಗ್ಯದ ಯೋಜನೆ ಅನ್ವಯವಾಗುದಿಲ್ಲಾ. ಪೊಲೀಸ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಅವಲಂಬಿತ ನಾಮಿನಿ ಪತ್ನಿ ಅಥವಾ ಪತಿಗೆ ಮಾತ್ರ ಈ
ಯೋಜನೆ ಶಾಶ್ವತವಾಗಿ ಅನ್ವಯವಾಗುತ್ತೆ.
ಇಂತಹದೊಂದು ದೊಡ್ಡ ಸಮಸ್ಯೆಯನ್ನು ಸನ್ಮಾನ್ಯ ಬಸವರಾಜ ಬೊಮ್ಮಾಯಿ ಅವರು ಒಂದು ವೇಳೆ ಬಗೆಹರಿಸಿದ್ದೆ ಆದ್ದಲ್ಲಿ ಕರ್ನಾಟಕದ ಪೊಲೀಸ ಇಲಾಖೆಯಲ್ಲಿ ದೊಡ್ಡದೊಂದು ಬದಲವಾಣೆ ಮಾಡಿದ ಕೀರ್ತಿ ಶ್ರೀ ಬಸವರಾಜ ಬೊಮ್ಮಾಯಿ ಅವರಿಗೆ ಸಲ್ಲುತ್ತೆ.
ಗೃಹ ಇಲಾಖೆ ಸಚಿವರಾಗಿ ಕೆಲಸ ಮಾಡಿರುವ ಬಸ್ವರಾಜ ಬೊಮ್ಮಾಯಿ ಅವರಿಗೆ ಪೊಲೀಸ ಇಲಾಖೆ ಆಗು ಹೋಗುಗಳ ಬಗ್ಗೆ ಸಂಪೂರ್ಣ ಮಾಹಿತಿ ಇದೆ. ಹೀಗಾಗಿ ಅವರೇ ಇದೀಗ ರಾಜ್ಯದ ಸಿಎಂ ಆಗಿರುವುದರಿಂದ ಇಂತಹದೊಂದು ದೊಡ್ಡ ಬದಲಾವಣೆ ಮಾಡುತ್ತಾರಾ? ಸಿಎಂ ಬಸವರಾಜ ಬೊಮ್ಮಾಯಿ ಎಂದು ಪೊಲೀಸ್ ಇಲಾಖೆಯ ಲಕ್ಷಾಂತರ ಮಂದಿ ಕಾದು ನೋಡುತ್ತಿದ್ದಾರೆ.
ಇದು
ಪವರ ಸಿಟಿ ನ್ಯೂಸ್ ಕನ್ನಡದ ಸಾಮಾಜಿಕ ಕಳಕಳಿ……