ರಾಜಕೀಯ ನಿಂತ ನೀರಲ್ಲಾ- ಇದೊಂದು ಚದುರಂಗದಾಟ ರೀ….
ಧಾರವಾಡ
ರಾಜಕೀಯ ಒಂದು ಚದುರಂಗದಾಟ ಇದ್ದಂತೆ. ಇಲ್ಲಿ ಯಾರು ಚೆಕ್ಮೆಟ್ ಕೊಟ್ಟು ಚಕಮಾಯಿಸ್ತಾರೆ ಗೊತ್ತಾಗೊಲ್ಲಾ.
ಅದಕ್ಕೆ ತಾಜಾ ಉದಾಹರಣೆ ಕೊಡುತಾ ಇದೆ. ಪವರ್ ಸಿಟಿ ನ್ಯೂಸ್ ಕನ್ನಡ.
ರಾಜ್ಯದಲ್ಲಿ ಜಿಡಿಎಸ್ ಪಕ್ಷದಿಂದ ಶಾಸಕನಾಗಿ ಆಯ್ಕೆಯಾಗಿ ಸ್ಥಾನಮಾನ ಪಡೆದು ಇದೀಗ ಆ ಪಕ್ಷಕ್ಕೆ ಗುಡಬೈ ಹೇಳತಾ ಇದಾರೆ ಧಾರವಾಡ ಜಿಲ್ಲೆಯ ಜೆಡಿಎಸ್ ಪಕ್ಷದ ಪ್ರಭಾವಿ ನಾಯಕ ಎನ್.ಎಚ್.ಕೊನರೆಡ್ಡಿ.
ನವಲಗುಂದ ಕ್ಷೇತ್ರದಿಂದ ಜೆಡಿಎಸ್ ಶಾಸಕನಾಗಿ ಆಯ್ಕೆಯಾಗಿದ್ದ ಕೊನರೆಡ್ಡಿ ಅವರು ಇದೀಗ ಕಾಂಗ್ರೆಸ ಪಕ್ಷದಲ್ಲಿ ಗುರುತಿಸಿಕೊಂಡು ಪಕ್ಷಕ್ಕೆ ಸೇರಲು ತಯಾರಿ ನಡೆಸಿದ್ದಾರೆ.
ಈಗಾಗಲೇ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಲೀಂ ಅಹ್ಮದ ಪರವಾಗಿ ವೇದಿಕೆ ಹಂಚಿಕೊಂಡಿದ್ದಾರೆ ಕೊನರೆಡ್ಡಿ.
ಮೊನ್ನೆ ನವಲಗುಂದದ ಒಂದು ವೇದಿಕೆಯಲ್ಲಿ ವಿನೋದ ಅಸೂಟಿ ಅವರನ್ನು ಸೈಡಗೆ ಸರಿಸುವ ಫೋಟೊ ಕೂಡ ವೈರಲ್ ಆಗಿತ್ತು..
ಇವರು ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ರೆ ಇವರ ಜೋತೆಗೆ ಒಡನಾಟ ಹೊಂದಿರುವ ಜೆಡಿಎಸ್ ಯುವ ಘಟಕದ ಪದಾಧಿಕಾರಿಯೂ ಆಗಿರುವ ಬಸವರಾಜ ಭಜಂತ್ರಿ ನೀವು ಮುಂದೆ ಇದ್ದರೆ ನಾವು ಹಿಂದೆ ಬರ್ತೇವಿ ಅಣ್ಣಾರ ನಿಮ್ಮ ಜೊತೆಗೆ ಅಂತಾ ಜೈ ಜೈ ಅಂತೀದಾರೆ.
ಕೊನರೆಡ್ಡಿ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುವ ಬಗ್ಗೆ ಖಚಿತಪಡಿಸಿದ್ದು, ಕ್ಷೇತ್ರದ ಜನರ ಒತ್ತಾಯಕ್ಕೆ ಮಣಿದು ನಿರ್ಧಾರ ಕೈಗೊಳ್ಳುವುದು ಅನಿವಾರ್ಯವಾಗಿದೆ.
ಜೆಡಿಎಸ್ ವರೀಷ್ಠರ ಬಗ್ಗೆನನಗೆ ಅಸಮಾಧಾನ ಇಲ್ಲಾ ಎಂದು ಹೇಳಿದ್ದಾರೆ.
ಇವರು ಕಾಂಗ್ರೆಸ್ ಸೇರಿದ್ರೆ, ನವಲಗುಂದ ತಾಲೂಕಿನಲ್ಲಿ ವಿನೋದ ಅಸೂಟಿ ಗತಿಯೇನು? ಧಾರವಾಡ ಜಿಲ್ಲೆಯಲ್ಲಿ ಜೆಡಿಎಸ್ ಮುಖಂಡ ಗುರುರಾಜ ಹುಣಶಿಮರದ ಮುಂದಿನ ನಡೆ ಏನು? ಎನ್ನುವ ಮಾತುಗಳು ಇದೀಗ ಧಾರವಾಡ ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.
ನೀಜಕ್ಕೂ ಕೋನರೆಡ್ಡಿ ಅವರು ತೆನೆ ಪಕ್ಷಕ್ಕೆ ಚೆಕಮೆಟ್ ಕೊಟ್ಟು, ಕೈ ಹಿಡಿಯುವುದು ಬಹುತೇಕ ಅಂತಿಮವಾಗಿದೆ.