ಯುವ ನೃತ್ಯ ಸಂಸ್ಥೆಯ ಮಕ್ಕಳ ಬೇಸಿಗೆ ಶಿಬಿರದಲ್ಲಿ : ನಾಗರಾಜ್ ಗೌರಿ!
ಯುವಾ ನೃತ್ಯ ಸಂಸ್ಥೆ ವತಿಯಿಂದ ಮಕ್ಕಳ ಬೇಸಿಗೆ ಶಿಬಿರ ಹಮ್ಮಿಕೊಂಡ ಹಿನ್ನೆಲೆಯಲ್ಲಿ. ಧಾರವಾಡದ ಸಪ್ತಾಪೂರದ ಉದ್ಯಾನವನದಲ್ಲಿ ನಡೆದ ವನಮಹೋತ್ಸವಕ್ಕೆ ನಾಗಾರಜ್ ಗೌರಿ ಚಾಲನೆ ನೀಡಿದರು.
ಈ ಸಂಧರ್ಭದಲ್ಲಿ ಮಾತನಾಡಿದ ಅವರು ಸಾಮಾನ್ಯವಾಗಿ ನಾವು ವನಮಹೋತ್ಸವ ಕಾರ್ಯವನ್ನು ಜೂನ್ ತಿಂಗಳಲ್ಲಿ ಆಚರಿಸುತ್ತೇವೆ. ಆದರೆ ಬದಲಾದ ಹವಾಮಾನ ಹಾಗೂ ಪೃಕೃತಿಯ ವಿಕೋಪಗಳು ಮನುಷ್ಯನ ಬದುಕಿನ ಮೇಲೆ ಅಡ್ಡಪರಿಣಾಮ ಬೀರುತ್ತಿದೆ.
ಆದ್ದರಿಂದ ನಮ್ಮ ಸುತ್ತ ಮುತ್ತಲಿನ ಪರಿಸರ ಗಿಡ ಮರಗಳನ್ನು ಸಂರಕ್ಷಿಸಿ ಉಳಿಸಿ ಬೆಳೆಸುವ ಭಾವನೆಗಳು ಪ್ರತಿಯೊಬ್ಬರಲ್ಲೂ ಮೂಡ ಬೇಕಿದೆ.ಇದರಿಂದ ಅನೇಕ ಪ್ರಾಣಿ,ಪಕ್ಷಿಗಳು ಬದುಕುತ್ತವೆ. ಈ ಕೆಲಸವನ್ನು ನಾವು ಈ ದಿನ ಪರಿಸರದ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸಿದರೆ ಅದು ಪರಿಸರ ಮಾಲಿನ್ಯವನ್ನು ತಡೆಗಟ್ಟಲು ಸಹಕಾರಿಯಾಗುತ್ತದೆ.
ಹೀಗಾಗಿ ನಾವೆಲ್ಲರೂ ಭೇದ ಭಾವ ಮಾಡದೆ ಪರಿಸರವನ್ನು ಸ್ವಚ್ಚಂದ ವಾಗಿರಿಸುವುದರ ಜೋತೆಗೆ ಗಿಡ ಮರಗಳನ್ನೂ ಸಹ ಬೆಳೆಸಿದರೆ ಭವಿಷ್ಯತ್ ಕಾಲದಲ್ಲಿ ಒಳಿತಾಗಲಿದೆ.ಮತ್ತು ಬೇಸಿಗೆಯ ಈ ಶಿಬಿರದಲ್ಲಿ ಇಂತಹ ಸಮಾಜ ಮುಖಿ ಕೆಲಸವನ್ನು ಮಾಡುತ್ತಿರುವ ಯುವ ನೃತ್ಯ ಸಂಸ್ಥೆ ಗೆ ಅಭಿನಂದೆನೆ ತಿಳಿಸಿದರು.
ಇನ್ನೂ ಕಾರ್ಯಕ್ರಮಕ್ಕೆ ಆಗಮಸಿದ್ದ ಪರಿಸರ ಪ್ರೇಮಿಯಾದ ಹರ್ಷವರ್ಧನ ಶಿಲವಂತ ಮಾತನಾಡಿ ಮಕ್ಕಳಿಗೆ ಸಸ್ಯ ಹಾಗೂ ಅದರ ಪ್ರಯೋಜನಗಳ ಕುರಿತಾಗಿ ವಿಶೇಷ ಮಾಹಿತಿ ನೀಡಿದರು.
ಈ ಸಂಧರ್ಭದಲ್ಲಿ ಕನ್ನಡ ಪರ ಹೋರಾಟಗಾರ ಗಿರೀಷ್ ಪೂಜಾರ , ತೆರಿಗೆ ಇಲಾಖೆಯ ಸಿಬ್ಬಂದಿ ಅಮರೇಶ್ ರಾಠೋಡ್, ಯುವ ನೃತ್ಯ ಸಂಸ್ಥಾಪಕ ನಿರ್ದೇಶಕರಾದ ರಮೇಶ್ ಪಾಟೀಲ್, ಸಿಬ್ಬಂದಿಗಳಾದ ಮೀನಾಕ್ಷಿ ಬಾಳೋಜಿ, ಮತ್ತು ಮಿನಾಕ್ಷಿ ಹೊಸಮನಿ ಉಪಸ್ಥಿತರಿದ್ದರು.