ಯುವಜನತೆಗೆ ಜಾಗೃತಿ ಕಾರ್ಯಕ್ರಮ
ಧಾರವಾಡ
ಜೂನ 26 ಅಂತರರಾಷ್ಟ್ರೀಯ ಮಾದಕ ವಸ್ತುಗಳು ಮತ್ತು ಅಕ್ರಮ ಸಾಗಣಿಕೆ ವಿರೋಧ ದಿನಾಚರಣೆ ಅಂಗವಾಗಿ ಶ್ರೀ ಮೈತ್ರಿ ಅಸೋಸಿಯೇಷನ ಹಾಗೂ ಕರ್ನಾಟಕ ರಾಜ್ಯ ಪೊಲೀಸ ಇಲಾಖೆ ಹತ್ತನೇ ಪಡೆ ವತಿಯಿಂದ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು..
ರಾಯಾಪುರದ ಕೆಎಸಆರಪಿ ಮೈದಾನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ನಿವೃತ್ತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರು ಶ್ರೀಮತಿ ಸರೋಜಿನಿ ಕಡೆಮನಿ ಉದ್ಘಾಟಿಸಿದರು..
ಶ್ರೀಮತಿ ಸರೋಜಿನಿ ಕಡೆಮನಿ ಮಾತನಾಡಿ ಡ್ರಗ್ಸ, ಗಾಂಜಾ, ಅಫೀಮ ಅಂತಹ ಮಾದಕ ವಸ್ತು ಗಳಿಂದ ಮಕ್ಕಳನ್ನು ದೂರವಿಡಬೇಕು .. ಈಗಾಗಲೇ ಯಾರಾದರೂ ಚಟಕ್ಕೆ ಅಂಟಿಕೊಂಡಿದ್ದರೆ ಅಂತವರನ್ನು ಮೈತ್ರಿ ಫೌಂಡೇಶನಗೆ ಸೇರಿಸಿ ಮಾದಕ ವಸ್ತು ಗಳಿಂದ ಗುಣ ಮುಖ ರನ್ನಾಗಿ ಮಾಡಬೇಕು ಎಂದರು..
ಪೊಲೀಸ ಇಲಾಖೆಯ ಸಹಾಯಕ ಕಮಾಂಡೆಂಟ ಶ್ರೀ ವಿಶ್ವನಾಥ ನಾಯಕ ಮಾತನಾಡಿ ಪೋಷಕರು ತಮ್ಮ ಮಕ್ಕಳ ಮೇಲೆ ನಿಗಾ ವಹಿಸಬೇಕು ಜೊತೆಗೆ ಮಕ್ಕಳಿಗೆ ಆಸ್ತಿ ಮಾಡುವ ಬದಲು ಮಕ್ಕಳನ್ನ ಆಸ್ತಿಯನ್ನಾಗಿ ಮಾಡಬೇಕು ಎಂದು ತಿಳಿ ಹೇಳಿದರು..
ಸಹಾಯಕ ಕಮಾಂಡೆಂಟ್ ಶ್ರೀ ವಿಶ್ವನಾಥ ನಾಯಕ ಹಾಗೂ ಶ್ರೀ ಮಾರುತಿ ಎಸ ಆರ ಹಾಗೂ ಮಂಜುನಾಥ ಹೆಬಸೂರ ಹಾಗೂ ಅಶೋಕ ಅಡವಿ ಹಾಗೂ ಡಾ. ಮಾಲಾ ಸತಗಿ ಹಾಗೂ ಶ್ರೀ ನಾಗನಗೌಡ ಮುದಿಗೌಡ್ರ ಸೇರಿದಂತೆ ಈ ಕಾರ್ಯಕ್ರಮದಲ್ಲಿ ಕೆಎಸಆರಪಿ ಪೊಲೀಸ ಸಿಬ್ಬಂದಿ ಹಾಗೂ ಯುವಕರು ಹಾಗೂ ಪೋಷಕರು ಉಪಸ್ಥಿತರಿದ್ದರು..