ಮನಸೂರಿನ ಮನೆ ಬಿದ್ದ ರೈತನಿಗೆ ನವೆಂಬರ್ 30 ರಂದು ಪರಿಹಾರ – ಜಿಲ್ಲಾಧಿಕಾರಿ
ಧಾರವಾಡ
ಪವರ್ ಸಿಟಿ ನ್ಯೂಸ್ ಕನ್ನಡದಲ್ಲಿ ಮನಸೂರಿನಲ್ಲಿ ಬೀದಿಗೆ ಬಿದ್ದ ರೈತನ ಕುಟುಂಬ ಎಂದು ಸುದ್ದಿ ಪ್ರಸಾರ ಮಾಡಲಾಗಿತ್ತು.
ಮನಸೂರು ಗ್ರಾಮದ ಕರೆಪ್ಪ ಅರಳಿಕಟ್ಟಿ ಕುಟುಂಬ ಅಕಾಲಿಕ ಮಳೆಗೆ ಬೆಳೆ ಹಾನಿ ಹಾಗೂ ಮನೆ ಬಿದ್ದು ಬೀದಿಯಲ್ಲಿ ಜೀವನ ನಡೆಸುವಂತಹ ಸ್ಥಿತಿ ಆಗಿತ್ತು.
ಈ ಸುದ್ದಿಯನ್ನು ಜಿಲ್ಲಾಧಿಕಾರಿ ನಿತೇಶ ಪಾಟೀಲ್ ಅವರ ಗಮನಕ್ಕೂ ತರಲಾಗಿತ್ತು.
ತಕ್ಷಣ ಜಿಲ್ಲಾಧಿಕಾರಿ ತಲಾಟಿ ಅಲ್ಲಾಭಕ್ಷ ನದಾಫ ಹಾಗೂ ಇತರೆ ಕಂದಾಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ, ನವೆಂಬರ್ 30 ರೊಳಗೆ ಪರಿಹಾರ ಕೊಡುತ್ತೇವೆ ಎಂದು ಪವರ್ ಸಿಟಿ ನ್ಯೂಸ್ ಕನ್ನಡಕ್ಕೆ ಮಾಹಿತಿ ಕೊಟ್ಟಿದ್ದರು.
ಅದಾದ ಮೇಲೆ ಜಿಲ್ಲಾ ಉಸ್ತುವಾರಿ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಮನಸೂರು ಗ್ರಾಮಕ್ಕೆ ಭೇಟಿ ಸೂಕ್ತ ಪರಿಹಾರ ಕೊಡಲು ಏನೆಲ್ಲಾ ಸಾಧ್ಯತೆಗಳು ಇವೆ ಅದನ್ನು ಮೊದಲು ಮಾಡಿ ಎಂದು ಅಧಿಕಾರಿಗಳಿಗೆ ಸೂಚಿಸಿ ರೈತನ ಕುಟುಂಬಕ್ಕೆ ಭರವಸೆ ನೀಡಿದ್ರು.
ಈ ಬಗ್ಗೆ ಜಿಲ್ಲಾಧಿಕಾರಿಗಳು ಪವರ್ ಸಿಟಿ ನ್ಯೂಸ್ ಕನ್ನಡದ ಜೋತೆಗೆ ಮಾತನಾಡಿ, ಮೊದಲ ಕಂತಿನಲ್ಲಿ ಅಕಾಲಿಕ ಮಳೆಯಿಂದ ಮನೆ ಬಿದ್ದವರಿಗೆ ಎ.ಬಿ.ಸಿ ಕೆಟಗರಿಯಲ್ಲಿ _95 ಸಾವಿರ ರೂಪಾಯಿ ಕೊಡಲಾಗುತ್ತಿದೆ. ಆ ಪರಿಹಾರ ಕೊಟ್ಟು ಉಳಿದ ಪರಿಹಾರದ ಹಣವನ್ನು ನಂತರದ ದಿನಗಳಲ್ಲಿ ಕೊಡಲಾಗುವುದು ಎಂದರು.