ಸ್ಥಳೀಯ ಸುದ್ದಿ
ಮದುವೆ ಸಮಾರಂಭಕ್ಕೆ ಹೊರಟಿದ್ದ ವಾಹನ ಪಲ್ಟಿ- ತಪ್ಪಿದ ಭಾರಿ ಅನಾಹುತ
ಧಾರವಾಡ
ಧಾರವಾಡ ತಾಲೂಕಿನ ತಿಮ್ಮಾಪುರ ಗ್ರಾಮದಿಂದ ಮದುವೆ ಸಮಾರಂಭಕ್ಕೆ ತೆರಳುತ್ತಿದ್ದ ವಾಹನ ಪಲ್ಟಿಯಾಗಿ
ಅದೃಷ್ಟವಶಾತ್ ದೊಡ್ಡದೊಂದು ಅನಾಹುತ ತಪ್ಪಿದೆ.
ಪಲ್ಟಿಯಾದ ವಾಹನದಲ್ಲಿ ಇದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಜಿಲ್ಲಾಸ್ಪತ್ರೆಗೆ ಚಿಕೆತ್ಸೆಗೆ ದಾಖಲಿಸಲಾಗಿದೆ.
ಬಯಲು ಸೀಮೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ತವನಪ್ಪ ಅಷ್ಟಗಿ ಗಾಯಗೊಂಡವರ ಆರೋಗ್ಯ ವಿಚಾರಿಸಿ, ಗಾಯಾಳುಗಳಿಗೆ ಎಳ್ಳನೀರು ನೀಡಿ ಧೈರ್ಯ ತುಂಬುವ ಮೂಲಕ ವೈದ್ಯಾಧಿಕಾರಿಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಸೂಚಿಸಿದ್ರು.