ಭಾರತ ಸಂವಿಧಾನ ದಿನ ಮತ್ತು ಎಎಪಿ ಸಂಸ್ಥಾಪನಾ ದಿನ ಆಚರಣೆ
ಧಾರವಾಡ
ನವೆಂಬರ್ 26 ಪ್ರತಿಯೊಬ್ಬ ಭಾರತೀಯರ ಪಾಲಿಗೂ ಅತ್ಯಂತ ಮಹತ್ವದ ದಿನ. ಪವಿತ್ರ ಸಂವಿಧಾನದ ಮೂಲಕ ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವಕ್ಕೊಂದು ಅರ್ಥ ಕಲ್ಪಿಸಿಕೊಡುವ ವ್ಯವಸ್ಥೆಯನ್ನು ಜಾರಿಗೆ ತಂದ ದಿನವಿದು. ಪ್ರತಿಯೊಬ್ಬ ಭಾರತೀಯರ ಶಕ್ತಿಯಾದ, ಎಲ್ಲರ ಪಾಲಿಗೂ ಪವಿತ್ರ ಗ್ರಂಥವಾದ ನಮ್ಮ ಸಂವಿಧಾನವನ್ನು 1949ರ ನವೆಂಬರ್ 26ರಂದು ಅಂಗೀಕರಿಸಲಾಗಿತ್ತು. ಹೀಗಾಗಿ, ಈ ದಿನವನ್ನು ದೇಶಾದ್ಯಂತ ಸಂವಿಧಾನ ದಿನವಾಗಿ ಆಚರಿಸಲಾಗುತ್ತದೆ. ಈ ಅಭೂತಪೂರ್ವ ಸಂವಿಧಾನ ಶಿಲ್ಪಿ ಡಾಕ್ಟರ್ ಬಿ. ಆರ್. ಅಂಬೇಡ್ಕರ ಅವರ ಪ್ರತಿ ಭಾರತೀಯರಿಗೆ ಯಾವುದೇ ತಾರತಮ್ಯ ಮಾಡದೆ ಎಲ್ಲರಿಗೂ ಸಮಾನ ಮೂಲಭೂತ ಹಕ್ಕುಗಳನ್ನು ಸಿಗುವ ಹಾಗೆ ಕನಸು ಕಟ್ಟಿ ಬರೆದ ಮಹಾನ ಗ್ರಂಥ ಅಂಗಿಕಾರವೇನೋ ಮಾಡಲಾಯಿತು ಆದರೆ ವಾಸ್ತವಿಕವಾಗಿ ಆ ಹಕ್ಕುಗಳು ಸಿಗಲೇ ಇಲ್ಲ.
ಇದೆ ಮಹತ್ವದ ದಿನದಂದು ಭಾರತ ದೇಶದಲ್ಲಿನ ಕೊಳಕು, ಭ್ರಷ್ಟಾಚಾರದ ರಾಜಕಾರಣದಿಂದ, ಸಂವಿಧಾನಿಕ ಮತ್ತು ಮೂಲಭೂತ ಹಕ್ಕುಗಳಿಂದ ವಂಚಿತ ಅವರಿವರೆನ್ನದೆ ಪ್ರತಿ ಭಾರತೀಯರಿಗೆ ಆ ಹಕ್ಕುಗಳನ್ನು ವಾಸ್ತವಿಕವಾಗಿ ಸಿಗುವಹಾಗೆ ಮಾಡುವ ದೃಢ ನಿರ್ಧಾರದಿಂದ ಎಎಪಿ ಪಕ್ಷವನ್ನು 2012 ರಲ್ಲಿ ಸಂಸ್ಥಾಪಿಸಲಾಯಿತು ಹಾಗೂ ದೆಹಲಿ ಮುಖ್ಯಮಂತ್ರಿ ಶ್ರೀ ಅರವಿಂದ ಕೇಜ್ರಿವಾಲ ಅವರ ಮುಂದಾಳತ್ವದಲ್ಲಿ ಕಳೆದ 9 ವರ್ಷಗಳಲ್ಲಿಯೇ ತಮ್ಮ ಜನಪರ ಆಡಳಿತದಲ್ಲಿ ದೆಹಲಿಯ ಪ್ರಜೆಗಳಿಗೆ ಆ ಮೂಲಭೂತ ಸೌಕರ್ಯಗಳನ್ನು ತಲುಪಿಸಿ, ಇಚ್ಛಾಶಕ್ತಿ ಮಾತ್ರ ಇದ್ದರೆ ಇದು ಸಾಧ್ಯವಾಗಬಹುದು ಎಂದು ಸಾಬೀತುಪಡಿಸಿದ್ದಾರೆ.
ಇವತ್ತು ಎಎಪಿ ಧಾರವಾಡ ಜಿಲ್ಲೆಯ ಕಾರ್ಯಕರ್ತರು ಶಹರದ ವಿವೇಕಾನಂದ ವೃತ್ತದಲ್ಲಿ ವಿನೂತನವಾಗಿ ಮಹಾತ್ಮ ಗಾಂಧೀಜಿಯವರ ಪಾತ್ರಧಾರಿಯ ಕರಕಮಲಧಿಂದ ಶ್ರೀ ಬೀ. ಆರ್. ಅಂಬೇಡ್ಕರ ಅವರ ಮೂರ್ತಿಗೆ ಹಾರವನ್ನು ಹಾಕಿ ಸನ್ಮಾನಿಸಿ ಮತ್ತು ಕೇಕ್ ಕತ್ತರಿಸಿ ಜನರಿಗೆ ಈ ಮಹತ್ವದ ದಿನವನ್ನೂ ಪರಿಚಯಿಸಿ ಸಿಹಿ ಹಂಚಿ ಆಚರಿಸಲಾಯಿತು. ಹಾಗೂ ಕೋರೋನ ಮೂರನೆಯ ಅಲೆಯ ಮಹಾಮಾರಿ ಎಸ್.ಡಿ.ಎಂ. ವೈದ್ಯಕೀಯ ಮಹಾವಿದ್ಯಾಲಯದಲ್ಲಿನ 116 ವಿದ್ಯಾರ್ಥಿಗಳಲ್ಲಿ ಸೋಂಕಿದ ಕಾರಣ ಮಾಸ್ಕ ಹಂಚಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಜನರಿಗೆ ತಿಳಿಸಿದರು.
ತದನಂತರ ಮಾತಾಡುತ್ತಾ ಧಾರವಾಡ ಶಹರದ ಸಂಚಾಲಕ ಶ್ರೀ ಪ್ರವೀಣ್ ನದಕಟ್ಟಿನ ಇವತ್ತು ಭಾರತದ ಇತಿಹಾಸದಲ್ಲಿ ಎರಡು ಮೈಲಿಗಲ್ಲು ಸ್ಥಾಪಿಸಿದ ದಿನ ಒಂದು ದಿನ ಪ್ರತಿಯೊಬ್ಬ ಭಾರತೀಯರಿಗೆ ಸಮಾನ ಹಕ್ಕು ಸಿಗುವ ಕನಸು ಕಟ್ಟಿ ಬರೆದು ಪವಿತ್ರ ಗ್ರಂಥ ಅಂಗೀಕರಿಸಿದ್ದರು ಇನ್ನೊಂದು ಆ ಮೂಲಭೂತ ಹಕ್ಕುಗಳನ್ನು ಜನಸಾಮಾನ್ಯರಿಗೆ ವಾಸ್ತವಿಕವಾಗಿ ತಲುಪಿಸುವ ಉದ್ದೇಶದಿಂದ ಸ್ಥಾಪಿಸಿದ ಎಎಪಿ ಪಕ್ಷ ಮೈಲಿಗಲ್ಲು ಇಟ್ಟ ಸ್ಥಾಪನಾ ದಿನ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ದೆಹಲಿಯ ಜನರಿಗೆ ಸಿಕ್ಕ ಜನಪರ ಆಡಳಿತ, ಧಾರವಾಡ ಜನತೆಗೂ ಲಭಿಸುವ ಹಾಗೆ ಮಾಡುತ್ತೇವೆಂದು ಎಎಪಿ ಪಕ್ಷದ ಧಾರವಾಡ ಜಿಲ್ಲೆಯ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಪಣತೊಟ್ಟರು.
ಈ ಸಂದರ್ಭದಲ್ಲಿ ಹುಬ್ಬಳ್ಳಿ ಶಹರದ ಸಂಚಾಲಕ ಅನಂತಕುಮಾರ ಬುಗಡಿ,ಮಹಾತ್ಮ ಗಾಂಧೀಜಿ ಪಾತ್ರಧಾರಿ ಭೀಮನಗೌಡ ಕತವಿ, ರಾಘವೇಂದ್ರ ಕಮ್ಮಾರ, ಇಳಿಯಾಜ ಸವಣೂರು, ಸದಾನಂದ ಕದಾಪುರೆ, ತಾಹೀರ್ ಸರ್ವಾರ,ವಸಂತ ಸಕ್ಕರಿ, ಪರಶುರಾಮ ಮೂಲಿಮನಿ ಮತ್ತಿತರರು ಪಾಲ್ಗೊಂಡಿದ್ದರು.
ಧನ್ಯವಾದಗಳೊಂದಿಗೆ,
ತಮ್ಮ ವಿಶ್ವಾಸಿ
ಶ್ಯಾಮ ನರಗುಂದ
ಜಂಟಿ ಕಾರ್ಯದರ್ಶಿ
ಧಾರವಾಡ ಜಿಲ್ಲೆ
ಮೋ: 9538381919