ಸ್ಥಳೀಯ ಸುದ್ದಿ
ಬುದ್ದಿವಾದ ಹೇಳಿದ್ದಕ್ಕೆ ನದಿಗೆ ಹಾರಿ ಬಾಲಕಿ ಆತ್ಮಹತ್ಯೆ
ಚಿಕ್ಕಬಳ್ಳಾಪುರ: ಚೆನ್ನಾಗಿ ಓದುವಂತೆ ಪೋಷಕರು ಮಗಳಿಗೆ ಬುದ್ದಿವಾದ ಹೇಳಿದ್ದಕ್ಕೆ ಮನನೊಂದ ಬಾಲಕಿಯೋರ್ವಳು, ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ನಗರ ಹೊರವಲಯದ ಉತ್ತರ ಪಿನಾಕಿನಿ ನದಿಯಲ್ಲಿ ಘಟನೆ ನಡೆದಿದೆ.
ಗೌರಿಬಿದನೂರು ನಗರದ ಸುಮಂಗಲಿ ಬಡಾವಣೆಯ ವಿಜಯ್ ಕುಮಾರ್ ಹಾಗೂ ಭವ್ಯ ದಂಪತಿಯ ಪುತ್ರಿ 15 ವರ್ಷದ ಬಾಲಕಿ ವಿದ್ಯಾಶ್ರೀ ಮೃತ ದುರ್ದೈವಿಯಾಗಿದ್ದಾಳೆ.
ನಗರದ ಖಾಸಗಿ ಶಾಲೆಯಲ್ಲಿ ಹತ್ತನೆ ತರಗತಿಯಲ್ಲಿ ಬಾಲಕಿ ವಿದ್ಯಾಭ್ಯಾಸ ಮಾಡುತ್ತಿದ್ದಳು.ಆದ್ರೆ ವಿದ್ಯಾಶ್ರೀ ಸರಿಯಾಗಿ ಓದದೆ, ಮೊಬೈಲ್ ಆಟವಾಡಿಕೊಂಡಿರುತ್ತಿದ್ದಳಂತೆ. ಇದರಿಂದ ಆಕೆಯ ತಾಯಿ ಮಗಳಿಗೆ ನಿನ್ನೆ ಗುರುವಾರ ರಾತ್ರಿ ಬುದ್ದಿವಾದ ಹೇಳಿದ್ದಾರೆ. ಇದನ್ನ ಮನಸ್ಸಿಗೆ ಹಚ್ಚಿಕೊಂಡಿದ್ದ ವಿದ್ಯಾಶ್ರೀ ಮನನೊಂದು ಸಮೀಪದ ಉತ್ತರ ಪಿನಾಕಿನಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ