ಬೀದಿಗೆ ಬಿದ್ದಿರುವ ರೈತನ ನೋವಿಗೆ ಸ್ಪಂದಿಸಿದ ಜಿಲ್ಲಾ ಉಸ್ತುವಾರಿ ಸಚಿವ ಮುನೇನಕೊಪ್ಪ.
ಧಾರವಾಡ
ಪವರ್ ಸಿಟಿ ನ್ಯೂಸ್ ಕನ್ನಡದಲ್ಲಿ ಮನಸೂರಿನಲ್ಲಿ ಬೀದಿಗೆ ಬಿದ್ದ ರೈತನ ಕುಟುಂಬ ಎಂದು ನಿನ್ನೆಯಷ್ಟೇ ಸುದ್ದಿ ಪ್ರಸಾರ ಮಾಡಲಾಗಿತ್ತು.
ಮನಸೂರು ಗ್ರಾಮದ ಕರೆಪ್ಪ ಅರಳಿಕಟ್ಟಿ ಕುಟುಂಬ ಅಕಾಲಿಕ ಮಳೆಗೆ ಬೆಳೆ ಹಾನಿ ಹಾಗೂ ಮನೆ ಬಿದ್ದು ಬೀದಿಯಲ್ಲಿ ಜೀವನ ನಡೆಸುವಂತಹ ಸ್ಥಿತಿ ಆಗಿತ್ತು.
ಈ ಸುದ್ದಿಯನ್ನು ಜಿಲ್ಲಾಧಿಕಾರಿ ನಿತೇಶ ಪಾಟೀಲ್ ಅವರ ಗಮನಕ್ಕೂ ತರಲಾಗಿತ್ತು.
ಇವತ್ತು ಜಿಲ್ಲಾ ಉಸ್ತುವಾರಿ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಮನಸೂರು ಗ್ರಾಮಕ್ಕೆ ಭೇಟಿ ನೀಡಿ ಸೂಕ್ತ ಪರಿಹಾರ ಕೊಡಲು ಏನೆಲ್ಲಾ ಸಾಧ್ಯತೆಗಳು ಇವೆ ಅದನ್ನು ಮೊದಲು ಮಾಡಿ ಎಂದು ಅಧಿಕಾರಿಗಳಿಗೆ ಸೂಚಿಸಿ ರೈತನ ಕುಟುಂಬಕ್ಕೆ ಭರವಸೆ ನೀಡಿದ್ರು.
ನಿನ್ನೆಯಷ್ಟೇ,
ಈ ಬಗ್ಗೆ ಜಿಲ್ಲಾಧಿಕಾರಿಗಳು ಪವರ್ ಸಿಟಿ ನ್ಯೂಸ್ ಕನ್ನಡಕ್ಕೆ ಮಾಹಿತಿ ಕೊಟ್ಟು, ನವೆಂಬರ್ 30 ರೊಳಗೆ ಮನೆ ಬಿದ್ದು, ಬೆಳೆ ಹಾನಿಯಾಗಿ ಕಂಗಾಲಾಗಿರುವ ಕುಟುಂಬಕ್ಕೆ ಪರಿಹಾರ ಕೊಡಲಾಗುವುದು ಎಂದಿದ್ರು.
ಇವತ್ತು ರೈತನ ಮನೆಗೆ ಸಚಿವರು ಭೇಟಿ ಕೊಟ್ಟಿದ್ದರಿಂದ ಬದಕು ಮುಳುಗಿಯೇ ಹೊಯಿತು ಎನ್ನುವ ರೈತನಿಗೆ ಆತ್ಮವಿಶ್ವಾಸ ಸಿಕ್ಕಂತೆ ಆಯಿತು.
ಜನಸ್ನೇಹಿ ಜಿಲ್ಲಾಧಿಕಾರಿ ಹಾಗೂ ಜನ ಮೆಚ್ಚುಗೆ ಗಳಿಸಿರುವ ಜಿಲ್ಲಾ ಉಸ್ತುವಾರಿ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಅವರು ರೈತನ ಸಮಸ್ಯೆಗೆ ಸ್ಪಂದಿಸಿದಕ್ಕೆ ನೊಂದಿರುವ ಬಡ ಕುಟುಂಬದ ಹಾರೈಕೆಗಳು ಸದಾಕಾಲ ಈ ಇಬ್ಬರ ಜೋತೆಗೆ ಇದ್ದೆ ಇರುತ್ತೆ ಎನ್ನುವುದರಲ್ಲಿ ಎರಡು ಮಾತಿಲ್ಲಾ….
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ನಿತೇಶ ಪಾಟೀಲ್, ಕಲಘಟಗಿ ಶಾಸಕ ನಿಂಬಣ್ಣವರ್ ತಹಶಿಲ್ದಾರ ಸಂತೋಷ ಬಿರಾದಾರ, ಕಂದಾಯ ಇಲಾಖೆಯ ಅಧಿಕಾರಿಗಳಾದ ಮಂಜುನಾಥ ಗುಳಪ್ಪನವರ್, ಗ್ರಾಮ ಪಂಚಾಯಿತಿ ಅಧ್ಯಕ್ಷರು ಸೇರಿದಂತೆ ಇತರೆ ಭಾಗಿಯಾಗಿದ್ದರು
.