ಬಹು ವರ್ಷದ ಕಾಮಗಾರಿಗೆ ಪುನರುಜ್ಜೀವನ ತುಂಬಿದ ಶಾಸಕ ರಾಮಣ್ಣ ಲಮಾಣಿ
ಗದಗ:ಕಕ್ಕೂರ್ ಏತ ನೀರಾವರಿ ಕಾಲುವೆ ಒಂದನೇ ಹಂತ ಮತ್ತು ಎರಡನೇ ಹಂತ ಈ ಭಾಗದ ರೈತರ ಬಹು ವರ್ಷದ ಬೇಡಿಕೆಯಾಗಿದ್ದು ಈ ಯೋಜನೆಯಿಂದ ಕಕ್ಕೂರು. ಕಕ್ಕೂರ್ ತಾಂಡ. ಹೆಸರೂರ. ನಾಗರಹಳ್ಳಿ ಮತ್ತು ರಾಮನಹಳ್ಳಿ ಗ್ರಾಮಗಳ ರೈತರು ಮತ್ತು ಹೋರಾಟಗಾರರು ಗ್ರಾಮಸ್ಥರಿಗೆ ಪಕ್ಕದಲ್ಲಿ ತುಂಗಭದ್ರ ನದಿ ಇದ್ದರೂ ಇಲ್ಲದಂತಾಗಿತ್ತು ಹೀಗಾಗಿ ಸುಮಾರು 9 ಕೋಟಿ 50 ಲಕ್ಷ ರೂಪಾಯಿ ಅನುದಾನದಿಂದ ಈ ಕಾಮಗಾರಿಯನ್ನು ಪುನರುಜ್ಜೀವನ ಮಾಡುತ್ತಿದ್ದೇವೆ ಎಂದು ಕಕ್ಕೂರ ಗ್ರಾಮದಲ್ಲಿ ಏತ ನೀರಾವರಿ ಭೂಮಿ ಪೂಜೆ ಸಲ್ಲಿಸಿ ಮಾತನಾಡಿದ ಶಾಸಕ ರಾಮಣ್ಣ ಲಮಾಣಿ.ಮುಂಡರಗಿ ತಾಲೂಕಿನ ನಾಗರಹಳ್ಳಿ ಗ್ರಾಮದಲ್ಲಿ 50 ಲಕ್ಷ ರೂಪಾಯಿ ಸಿಸಿ ರಸ್ತೆ ಕಾಮಗಾರಿ ಮತ್ತು ಕಕ್ಕೂರ್ ಏತ ನೀರಾವರಿ ಕಾಲುವೆ ಒಂದನೇ ಹಂತ ಮತ್ತು ಎರಡನೇ ಹಂತದ ಪುನರುಜ್ಜೀವನ ಕಾಮಗಾರಿಗೆ ಭೂಮಿ ಪೂಜೆಯನ್ನು ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಶಾಸಕ ರಾಮಣ್ಣ ಲಮಾಣಿಯವರು ಮಾಡಿ 1350 ಮೀಟರ್ ಪೈಪ್ ಲೈನ್ ಮೂಲಕ ನೀರು ಹರಿಸಿ ನಂತರ 2.50 ಕಿಲೋಮೀಟರ್ ಕಾಲುವೆ ಮೂಲಕ ನೀರು ಹರಿಸುತ್ತದೆ ಸಿಸಿ ಕಾಲುವೆ ಮೂಲಕ ರೈತರ ಜಮೀನುಗಳಿಗೆ ನೀರು ಹರಿಸುವ ಕೆಲಸವನ್ನು ನಮ್ಮ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಪುನರುಜ್ಜೀವನ ಕಾಮಗಾರಿಯನ್ನ ಈ ಭಾಗದ ಜನರಿಗೆ ಮಾಡುತ್ತಿದ್ದೇವೆ, ಅದರ ಉಪಯೋಗವನ್ನು ಎಲ್ಲ ರೈತರು ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷರಾದ ಹೇಮಗೀರಿಶ ಹಾವಿನಾಳ. ಕರಿಬಸಪ್ಪ ಹಂಚಿನಾಳ. ರವೀಂದ್ರ ಉಪ್ಪಿನಬೆಟಗೇರಿ. ದೇವಪ್ಪ ಕಂಬಳಿ. ಎಸ್ ವಿ ಪಾಟೀಲ್. ಕುಮಾರಸ್ವಾಮಿ ಹಿರೇಮಠ. ಕಪ್ಪಣ್ಣ ಕೊಪ್ಪಣ್ಣವರ್. ಸುಭಾಷ್ ಗುಡಿಮನಿ. ರಂಗನಾಥ್ ನಾಯಕ್. ಲಕ್ಷ್ಮೀಬಾಯಿ ಗುಡಿಮನಿ. ದೇವಪ್ಪ ದೊಡ್ಡಮನಿ. ಮಂಜುನಾಥ್ ಹಟ್ಟಿ. ದಸ್ತಗಿರಸಾಬ.ಹೊಸಮನಿ. ಮಾರುತಿ.ಹ. ಹೊಸಮನಿ. ಜಿನ್ನಪ್ಪ ಜಾಲಪ್ಪನವರ್. ಈಶ್ವರಪ್ಪ ಮಲ್ಲಶೆಟ್ಟಿ. ಹನುಮಂತ ಸನಾದಿ. ಶಂಕ್ರಪ್ಪ ಕಾರ್ಬಾರಿ. ಬಸವರಾಜ ಮುಂಡವಾಡ್. ಸೋಮರೆಡ್ಡಿ ಮುದ್ದಾಬಳ್ಳಿ. ಮಹೇಶ್ ದೇಸಾಯಿ. ದೇವಪ್ಪ ಇಟಗಿ.ಮಾರುತಿ ನಾಗರಹಳ್ಳಿ. ನಾಗರಾಜ್ ಮುರುಡಿ ಉಪಸ್ಥಿತರಿದ್ದರು.