ಬಸ್ಸಿನ ಗಾಜು ಪುಡಿಗೊಳಿಸಿದ ಕಿಡಗೇಡಿಗಳು ಸ್ಥಳದಿಂದ ಪರಾರಿ!
ಧಾರವಾಡ
ಕ್ಷುಲ್ಲಕ ಕಾರಣಕ್ಕೆ ಬಸ್ಸಿನ ಗಾಜು ಒಡೆದ ಯುವಕರು ಸ್ಥಳದಿಂದ ಪರಾರಿಯಾದ ಘಟನೆ ನಗರದ ಯಾಲಕ್ಕಿ ಶೆಟ್ಟರ್ ಕಾಲೂನಿ ಬಳಿ ಇಂದು ಸಂಜೆ ನಡೆದಿದೆ.
ಧಾರವಾಡದಿಂದ ಹುಬ್ಬಳ್ಳಿಯತ್ತ ಪ್ರಯಾಣಿಕರಿದ್ದ ಬೇಂದ್ರೆ ಬಸ್ ಎದುರಿಗೆ ನಿಂತಿದ್ದ ಬಸ್ಸಿನ ಬಲಭಾಗಕ್ಕೆ ತಿರುಗಿಸಿ ಮುಂದೆ ಸಾಗುತ್ತಿದ್ದ ವೇಳೆ ಅದೆ ಮಾರ್ಗವಾಗಿ ಬೈಕ್ ನಲ್ಲಿ ಬರುತ್ತಿದ್ದವರು ಬೇಂದ್ರೆ ಬಸ್ ಡ್ರೈವರ್ ನಡುರಸ್ತೆಯಲ್ಲೇ ವಾಗ್ವಾದಕ್ಕಿಳಿದಿದ್ದಾರೆ. ಇ ವೇಳೆ ಹಿಂದೆ ಕಾರಿನಲ್ಲಿದ್ದ ಕೆಲವರು ಬಸ್ಸಿನ ಚಾಲಕನೊಂದಿಗೆ ರಸ್ತೆಯಲ್ಲಿ ಅಡ್ಡಗಟ್ಟಿ ಜಗಳಕ್ಕೆ ಮುಂದಾಗಿದ್ದಾರೆ. ಈ ವೇಳೆ ಬಸ್ ಹಾಗೂ ಕಾರಿನ ಇಬ್ಬರ ಮಧ್ಯೆ ಪ್ರವೇಶಿಸಿದ ಕೆಲ ಯುವಕರು ಬೇಂದ್ರೆ ಬಸ್ಸಿನ ಪ್ರಮುಖ ಗಾಜು ಒಡೆದು ಡ್ರೈವರ್ ಗೆ ವಾರ್ನಿಂಗ್ ಮಾಡಿ ಪರಾರಿಯಾದರೆಂದು ಹೇಳಲಾಗಿದೆ.ಇದರಿಂದ ಬಸ್ ನಲ್ಲಿ ಇದ್ದ ಪ್ರಯಾಣಿಕರು ಗಾಭರಿಗೊಂಡು ಬಸ್ ಇಳಿದು ಒಡಿದ್ದಾರೆ.
ಆದರೆ ಘಟನೆಯು ವಿದ್ಯಾಗಿರಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು. ವಿದ್ಯಾಗಿರಿ ಠಾಣೆಯ ಇನ್ಸ್ಪೆಕ್ಟರ್ ಘಟನೆಯ ಬಗ್ಗೆ ಯಾವುದೆ ದೂರುಗಳು ಬಂದಿಲ್ಲ.ಒಂದು ವೇಳೆ ದೂರು ಕೊಟ್ಟಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ. ಹಾಗಾದ್ರೆ ಆ ಯುವಕರು ಯಾರು? ಎಲ್ಲಿಯವರು?ಎಂಬುದನ್ನ ಪೊಲಿಸ್ ಇಲಾಖೆಯೆ ಪತ್ತೆ ಮಾಡ ಬೇಕಿದೆ.
ಅವಳಿನಗರದಲ್ಲಿ ಕೆಲವೊಂದು ಹೆಸರಾಂತ ರೌಡಿ ಗಳ ಹೆಸರನ್ನೇ ಬಳಸುತ್ತ ಸಾರ್ವಜನಿಕರನ್ನ ಬಹಿರಂಗವಾಗಿಯೆ ಬೆದರಿಸುವ ಕಾರ್ಯಗಳಿಗೆ ಅವಳಿನಗರದ ಪೊಲೀಸರು ಸರಿಯಾದ ಕ್ರಮ ಕೈಗೊಂಡಲ್ಲಿ ಮಾತ್ರ ಕಾನುನೂ ಸುವ್ಯವಸ್ಥೆಗೆ ಬಲ ಬರುತ್ತೆ ಎನ್ನುವುದು ಪ್ರಜ್ಞಾವಂತರ ಅಭಿಪ್ರಾಯ ವಾಗಿದೆ.