ಬಡ್ಡಿ ವ್ಯವಹಾರ ಕುರಿತು ಆಯುಕ್ತರ ಖಡಕ್ ಎಚ್ಚರಿಕೆ: ಆರೋಪಿಗಳಿಗೆ ಶೋಧ!
powercity news:
ಹುಬ್ಬಳ್ಳಿ
ಸಮಯಕ್ಕೆ ಸರಿಯಾಗಿ ಬಡ್ಡಿ ಕೊಡಲಿಲ್ಲವೆಂದು ಅಕ್ರಮ ಬಡ್ಡಿ ದಂಧೆ ಕೋರನೋರ್ವ ಮಹೀಳಾ ಶಿಕ್ಷಕಿಗೆ ಲೈಂಗಿಕ ಕುರುಕುಳ ನೀಡಿದ್ದಲ್ಲದೆ ವಾಟ್ಸ್‌ಪ್ ಮೂಲಕ ಅಶ್ಲೀಲ ಪದಗಳನ್ನು ಬಳಸಿ ಬೆದರಿಕೆಯೊಡ್ಡಿದ್ದಾನೆ.
ಹೌದು ಮೂರ್ನಾಲ್ಕು ದಿನಗಳ ಹಿಂದೆ ನಿಮ್ಮ ಪವರ್‌ಸಿಟಿ ನ್ಯೂಸ್ ಅಕ್ರಮ ಮೀಟರ್ ಬಡ್ಡಿ ದಂಧೆ ಹಾಗೂ ಅದರಿಂದಾಗುತ್ತಿರುವ ಅನಾಹುತ ಬೆಳವಣಿಗೆಗಳ ಕುರಿತು ಸಾಧ್ಯ ವಾದಷ್ಟು ಬೆಳಕು ಚೆಲ್ಲುವ ಪ್ರಯತ್ನ ಮಾಡಿದೆ.
ಇದು ಕೇವಲ ನಗರ ಪ್ರದೇಶ ವಷ್ಟೆ ಅಲ್ಲ ಹಳ್ಳಿಗಳಲ್ಲೂ ಕೂಡ ಬಡ ರೈತರು ಸಹ ಟಾರ್ಗೆಟ್ ಎನ್ನುವುದನ್ನ ಅಲ್ಲೆಗಳೆಯುವಂತಿಲ್ಲ.
ಅದರ ಕುರಿತಾದ ಸತ್ಯ ವರದಿಯನ್ನು ಮುಂದಿನ ದಿನಗಳಲ್ಲಿ ಮತ್ತೆ ಮಾಡುತ್ತದೆ ನಿಮ್ಮ ಪವರ್‌ಸಿಟಿ ನ್ಯೂಸ್ ತಂಡ.
ಆದ್ರೆ ಹಳೆ ಹುಬ್ಬಳ್ಳಿ ಆನಂದ ನಗರ ಮಹಿಳೆಗೆ ಬಡ್ಡಿ ಹಣ ನೀಡಿ, ಆಕೆಯ ಅಸಹಾಯಕತೆಯನ್ನೇ ಬಂಡವಾಳ ಮಾಡಿಕೊಂಡು ದೌರ್ಜನ್ಯ ಎಸಗುತ್ತಿರುವ ಮಂಜು ಪಾಟೀಲ್ ಹಾಗೂ ವಿರೇಶ್ ಪಾಟೀಲ್ ಎಂಬ ಹರಾಮಿಗಳ ಕುರಿತು ಸಂತ್ರಸ್ತೆ ಇಂದು ಆಯುಕ್ತರ ಕಚೇರಿಗೆ ತೆರಳಿ ತನಾಗದ ಅನ್ಯಾಯವನ್ನು ಆಯುಕ್ತರಿಗೆ ತಿಳಿಸಿದ್ದಾರೆ.
ಕೂಡಲೇ ತಪ್ಪಿತಸ್ಥರು ಯಾರೆ ಆದರೂ ಮುಲಾಜಿಲ್ಲದೆ ಕಾನೂನುಕ್ರಮ ಕೈಗೊಳ್ಳುವುದಾಗಿ ಮಹಿಳೆಗೆ ಆಯುಕ್ತರಾದ ರೇಣುಕಾ ಸುಕುಮಾರ ಅವರು ಭರವಸೆ ನೀಡಿದ್ದಾರೆ.