ಪ್ರಧಾನಿ ಕಾರ್ಯಕ್ರಮಕ್ಕೆ ಸಿದ್ಧವಾಗಿದೆ ಧಾರವಾಡ ಜಿಲ್ಲೆ
ಧಾರವಾಡ
ಈ ಹಿಂದೆ 1994 ರಲ್ಲಿ ಪ್ರಧಾನಿ ಆಗಿದ್ದವರು ಧಾರವಾಡ ಜಿಲ್ಲೆಗೆ ಬಂದು ಹೋಗಿದ್ದರು. ಅದಾದ ಬಳಿಕ ಬೇರೆ ಯಾರೂ ಪ್ರಧಾನಿ ಆದವರು ಧಾರವಾಡ ಜಿಲ್ಲೆಗೆ ಬಂದಿರಲಿಲ್ಲಾ. ಈಗ ಮೋದಿ ಅವರು ಮಾರ್ಚ 12 ಕ್ಕೆ ಐಐಟಿ ಉದ್ಘಾಟನೆಗೆ ಬಂದು ಸುಮಾರು 5 ಸಾವಿರ ಕೋಟಿ ರೂಪಾಯಿ ವೆಚ್ಚದ ಯೋಜನೆಗಳಿಗೆ ಚಾಲನೆ ಕೊಡುತ್ತಿರುವುದು ಧಾರವಾಡ ಜಿಲ್ಲೆಗೆ ಹೆಮ್ಮೆ ತಂದಿದೆ.
ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಈಗಾಗಲೇ ಸ್ಥಳ ಪರಿಶೀಲನೆ ಮಾಡಿದ್ದು, ಸಚಿವರು ಶಾಸಕರೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿಸಲು ಶ್ರಮ ವಹಿಸುತ್ತಿದ್ದಾರೆ.
ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಮೋದಿ ಅವರು ಉದ್ಘಾಟನೆ ಮಾಡುವ ಕಾರ್ಯಕ್ರಮಗಳ ಬಗ್ಗೆ ವಿವರವಾಗಿ ಹೇಳಿದ್ದಾರೆ.
ಕಾರ್ಯಕ್ರಮಕ್ಕೆ ಒಟ್ಟು 2 ಲಕ್ಷ ಜನರು ಸೇರಲಿದ್ದು, ಮೇಯರ್ ಅಂಚಟಗೇರಿ, ಶಾಸಕರಾದ ಅಮೃತ ದೇಸಾಯಿ, ಅರವಿಂದ ಬೆಲ್ಲದ, ಸಚಿವರಾದ ಶಂಕರ ಪಾಟೀಲ ಮುನೇನಕೊಪ್ಪ, ಹಾಲಪ್ಪಾ ಆಚಾರ, ಶಾಸಕ ನಿಂಬಣ್ಣವರ್, ಬಯಲು ಸೀಮೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ತವನ್ನಪ್ಪ ಅಷ್ಟಗಿ , ಮಾಜಿ ಶಾಸಕಿ ಸೀಮಾ ಮಸೂತಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುವಂತೆ ಮಹತ್ವದ ಜವಬ್ದಾರಿ ನಿಭಾಯಿಸುತ್ತಿದ್ದಾರೆ.
ಮೋದಿ ಅವರ ಆಗಮನಕ್ಕೆ ಧಾರವಾಡ ಜಿಲ್ಲೆ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಯ ಜನರು ಕಾತರದಿಂದ ಕಾಯುತ್ತಿದ್ದಾರೆ.