ಪೌರ ಕಾರ್ಮಿಕರ ಪಿ.ಎಫ್. ವಂತಿಕೆ ತುಂಬದ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಿ -ಜಿಲ್ಲಾಧಿಕಾರಿ ನಿತೇಶ್ ಪಾಟೀಲ್
ಧಾರವಾಡ
ಪೌರ ಕಾರ್ಮಿಕ ಪಿ.ಎಫ್. ವಂತಿಕೆ ಹಣವನ್ನು ತುಂಬದೇ ಇರುವ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಿ. ಇಂತಹ ಗುತ್ತಿಗೆದಾರರಿಗೆ ಪಾಲಿಕೆಯ ಯಾವುದೇ ಕಾಮಗಾರಿ ಅಥವಾ ಹೊರ ಗುತ್ತಿಗೆ ನೌಕರರ ಸಬರಾಜಿಗೂ ಅನುಮತಿ ನೀಡಬೇಡಿ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಪಾಲಿಕೆ ಆಯುಕ್ತರಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ನೂತನ ಸಭಾಂಗಣದಲ್ಲಿ ಜರುಗಿದ ಸಫಾಯಿ ಕರ್ಮಚಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
58 ಲಕ್ಷ ಪಿ.ಎಫ್. ಹಣದಲ್ಲಿ 24 ಲಕ್ಷ ಹಣವನ್ನು ಗುತ್ತಿಗೆದಾರ ತುಂಬಿದ್ದಾರೆ. ಈ ಹಣವನ್ನು ಪೌರಕಾರ್ಮಿಕ ಪಿ.ಎಫ್.ಖಾತೆಗೆ ತುಂಬಲಾಗಿದೆ. ಬಾಕಿ ಇರುವ 24 ಲಕ್ಷ ಹಣವನ್ನು ತುಂಬಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಪಾಲಿಕೆ ಆಯುಕ್ತ ಡಾ.ಸುರೇಶ್ ಇಟ್ನಾಳ್ ಸಭೆಗೆ ಮಾಹಿತಿ ನೀಡಿದರು.
ಸದ್ಯ ಪಿ.ಎಫ್. ಖಾತೆಗೆ ಜಮೆ ಮಾಡಿದ 24 ಲಕ್ಷ ಹಣ ಯಾರೆ ಖಾತೆ್ಗೆಗೆ ಜಮೆಯಾಗಿದೆ ಎಂಬುದನ್ನು ಪಾಲಿಕೆ ವೆಬ್ ಸೈಟ್ ನಲ್ಲಿ ಪ್ರಕಟಿಸಿ. ಬಾಕಿ 24 ಲಕ್ಷ ತುಂಬಿದ ಮೆಲೆಯೇ ಗುತ್ತಿಗೆದಾರನ್ನು ಕಪ್ಪು ಪಟ್ಟಿಯಿಂದ ತೆಗೆಯಿರಿ ಎಂದು ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.
ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಮೀನಾಕ್ಷಿ ಮಾತನಾಡಿ ನಿಮಗದಿಂದ ಪ್ರಸಕ್ತ ಸಾಲಿನಲ್ಲಿ ನೇರ ಸಾಲಕ್ಕೆ ಅರ್ಜಿ ಸಲ್ಲಿಸಿದ 38 ಜನರಿಲ್ಲಿ 32 ಜನರಿಗೆ ಸಾಲ ಮಂಜೂರು ಮಾಡಲಾಗಿದೆ.716 ಜನರಿಗೆ ನೇರ ಸಾಲ ಮಂಜುರಾತಿ ಗುರಿಯಿದೆ. ಸಫಾಯಿ ಕರ್ಮಚಾರಿ ಸಂಘಗಳಿಗೆ 75 :25 ಅನುಪಾತದಲ್ಲಿ ಸಕ್ಕಿಂಗ್, ಜಟ್ಟಿಂಗ್ ಮಿಷಿನ್ ಕೊಳ್ಳಲು ಅನುದಾನ ಒದಗಿಸಲಾಗುವುದು. ಸಫಾಯಿ ಕರ್ಮಚಾರಿಗಳ ಮಕ್ಕಳಿಗೆ ಉಚಿತ ಟ್ಯಾಬ್ ನೀಡಲು, ಸಫಾಯಿ ಕರ್ಮಚಾರಿ ಮಹಿಳೆಯರಿಗೆ ಶೇ.90% ಸಬ್ಸಿಡಿಯಲ್ಲಿ ಸ್ಕೂಟಿ ಖರೀಧಿಸಲು ನೆರವು ನೀಡಲಾಗುವುದು. ಈ ಕುರಿತು ಮಾಧ್ಯಮಗಳಲ್ಲಿ ಪ್ರಕಟಣೆ ನೀಡಲಾಗಿದೆ. ಆದರೂ ಸಾಕಷ್ಟು ಪ್ರಮಾಣದಲ್ಲಿ ಅರ್ಜಿಗಳು ಬಂದಿಲ್ಲ ಎಂದು ಸಭೆಗೆ ತಿಳಿಸಿದರು.
ಜಿಲ್ಲೆಯಲ್ಲಿ ಖಾಲಿ ಇರುವ ಸಫಾಯಿ ಕರ್ಮಚಾರಿಗಳ ನೇಮಕವನ್ನು ಆದಷ್ಟು ಬೇಗೆ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ಹೇಳಿದರು.ನಂತರ ಎಸ್.ಟಿ.ಪಿ ಹಾಗೂ ಟಿ.ಎಸ್.ಪಿ ಅನುದಾನದ ಬಳಕೆ ಕುರಿತು ಸಭೆ ಜರುಗಿತು.
ಸಭೆಯಲ್ಲಿ ಪೊಲೀಸ್ ಆಯುಕ್ತ ಲಾಭುರಾಮ್, ಧಾರವಾಡ ಪೊಲೀಸ್ ವರಿಷಿಷ್ಠಾಧಿಕಾರಿ ಪಿ.ಕೃಷ್ಣಕಾಂತ್, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಐ.ಎ.ಎಸ್.ಪ್ರೋಬೆಷನರಿ ಮಾಧವಗಿತ್ತೆ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಡಾ.ಎನ್.ಆರ್.ಪುರುಷೋತ್ತಮ್, ಸಫಾಯಿ ಕರ್ಮಚಾರಿ ಸಮಿತಿಯ ಸದಸ್ಯರು ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.