ಪೊಲೀಸರಿಗೆ ನೀಡುವ ವಾರದ ರಜೆಗೆ ಇಲಾಖೆಯಲ್ಲಿ ತಪ್ಪದ ಕಿರಿಕಿರಿ!
ಹುಬ್ಬಳ್ಳಿ
ಕರ್ನಾಟಕ ರಾಜ್ಯ ಪೊಲಿಸ್ ಇಲಾಖೆಯಲ್ಲಿ ವಾರದ ರಜೆ ನೀಡುವ ಕುರಿತು ಆಗುತ್ತಿರುವ ತಾರತಮ್ಯ ಬಯಲಿಗೆಳೆಯಲು ಪೊಲಿಸ್ ಮಹಾ ನಿರ್ದೇಶಕರು ಮತ್ತು ಪೊಲಿಸ್ ಇಲಾಖೆ ಮಹಾ ನೀರಿಕ್ಷಕರಿಗೆ ಸಲ್ಲಿಸಿರುವ ದೂರಿನ ಪ್ರತಿ ಇದೀಗ ಎಲ್ಲರನ್ನೂ ಹುಬ್ಬೆರಿಸುವಂತೆ ಮಾಡಿದೆ.
ಮೈಸೂರು ಭಾಗದ ಸ್ನೇಹಮಯಿ ಕೃಷ್ಣ ಎಂಬುವವರು ಮನವಿಯಲ್ಲಿ ಭಾ.ದಂ.ಸಂ.ಯ ಕಲಂ(೧೮೮)ರ ಅಡಿಯಲ್ಲಿ ರಾಜ್ಯಾದ್ಯಂತ ಎಲ್ಲ ಠಾಣೆಗಳಲ್ಲಿ ವಾರದ ರಜೆ ನೀಡದೆ ತಾರತಮ್ಯ ಎಸಗಿರುವ ಮತ್ತು ಆದೇಶ ಉಲ್ಲಂಘನೆ ಮಾಡಿರುವದನ್ನು ಕಾನೂನು ಬಧ್ಧವಾಗಿಯೆ ಪ್ರಶ್ನಿಸಿದ್ದಾರೆ.
ಹೌದು.. ಮಾನಸಿಕ ಒತ್ತಡದಿಂದ ಹಗಲಿರುಳು ಸಾರ್ವಜನಿಕ ಸೇವೆಯಲ್ಲೇ ತಮ್ಮ ಜೀವನ ಕಳೆಯುತ್ತಿರುವ ಪೊಲಿಸ್ ಇಲಾಖೆಯ ಸಿಬ್ಬಂದಿಗಳಿಗೆ ಸರ್ಕಾರವೆ ವಾರದ ರಜೆ ನಿಗದಿಪಡಿಸಿತ್ತು.
ಇದರಿಂದ ಪೊಲಿಸರು ಕೂಡ ಸಾರ್ವಜನಿಕರ ನಡುವೆ ವಾರದ ಒಂದು ದಿನವನ್ನು ತಮ್ಮ ಪರಿವಾರ, ಸ್ನೇಹಿತರ ಜೊತೆಯಲ್ಲಿ ಬೆರೆಯುವ ಅವಕಾಶ ವಿದೆ. ಮತ್ತು ಕೆಲಸದ ಮಾನಸಿಕ ಒತ್ತಡದಿಂದ ಒಂದಷ್ಟು ನೆಮ್ಮದಿ ಸಿಕ್ಕಂತಾಗಿತ್ತು. ಈ ದಿಸೆಯಲ್ಲಿ ಪೊಲಿಸ್ ಸಿಬ್ಬಂದಿಗಳ ಆತ್ಮಹತ್ಯೆಯಂತಹ ಪ್ರಕರಣಗಳು ಕೂಡ ಕಡಿಮೆಯಾದಂತಾಗಿದ್ದವು.
ಆದ್ರೆ ರಜೆ ನೀಡುವ ಠಾಣಾ ಅಧಿಕಾರಿಗಳು ಮಾತ್ರ ವಾರದ ರಜೆ ನೀಡದೆ ಸಿಬ್ಬಂದಿಗಳಿಗೆ ಕಿರಿ ಕಿರಿ ಉಂಟು ಮಾಡುತ್ತಿದ್ದರು ಎನ್ನುವ ಆರೋಪಗಳು ಸಹ ಆಗಾಗ್ಗೆ ಕೇಳಿ ಬರುತ್ತಿದೆ. ಆದ್ರೆ ಕೆಳವರ್ಗದ ಸಿಬ್ಬಂದಿಗಳು ಮಾತ್ರ ಕಿರಿ ಕಿರಿ ಮಾಡುವ ಅಧಿಕಾರಿಗಳ ಮೇಲೆ ಧ್ವನಿಯತ್ತದ ಪರಿಸ್ಥಿತಿ ಇಂದಿಗೂ ಇದೆ.