ರಾಜ್ಯಸ್ಥಳೀಯ ಸುದ್ದಿ

ಪೊಲಿಸ್ ಪೇದೆ ಆತ್ಮಹತ್ಯೆಗೆ ಟ್ವಿಸ್ಟ್ : ಹುಬ್ಬಳ್ಳಿ ಯ ವರದಿಗಾರ ಸೇರಿ 9ಜನ ವಿರುದ್ಧ ದೂರು ದಾಖಲು!

ಗದಗ

ಲಕ್ಕುಂಡಿ ಮೂಲದ ಪಿ ಸಿ ಪಾಟೀಲ್ ಎಂಬುವವರು ಗದಗ ನ ಬೆಟಗೇರಿ ಬಡಾವಾಣೆ ಪೊಲಿಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇದೆ ವೇಳೆ ಕಳೆದ ಮೂರು ತಿಂಗಳ ಹಿಂದೆ ವ್ಯಕ್ತಿಯೊಬ್ಬನ ವಿರುದ್ಧ ವಂಚನೆಯ ಪ್ರಕರಣ ದಾಖಲಾಗಿತ್ತು. ಆರೋಪಿಯನ್ನ ವಿಚಾರಿಸಿ ಆತ ಅಕ್ರಮ ವಾಗಿ ಕೊಟ್ಟಿದ್ದ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆಯುತ್ತಿದ್ದರು.

ಪ್ರಕರಣದಲ್ಲಿ ಒಂದಷ್ಟು ಬೆಲೆ ಬಾಳುವ ವಸ್ತುಗಳನ್ನು ರಿಕವರಿ ಮಾಡಲು ಬೆಟಗೇರಿ ಬಡಾವಣೆ ಪೊಲಿಸರ ಪೈಕಿ ಆತ್ಮಹತ್ಯೆ ಮಾಡಿಕೊಂಡ ಪೇದೆ ಪಿ ಸಿ ಪಾಟೀಲ್ ಕೂಡ ಒಬ್ಬರು.

ಸಾಂದರ್ಭಿಕ ಚಿತ್ರ

ಒಂದಿಷ್ಟು ಬಂಗಾರವನ್ನು ಪೊಲಿಸರೆ ಖಾಸಗಿಯಾಗಿ ಮಾರಿದ್ದಾರೆ. ಅದರ ವಿಡಿಯೋ ನಮಗೆ ಸಿಕ್ಕಿವೆ ಅದರಲ್ಲಿ ನೀವು ಮಾಡಿದ ಹಗರಣ ಬಯಲಿಗೆಳೆಯುತ್ತೇವೆ. ನಿನ್ನನ್ನು ನೌಕರಿಯಿಂದ ತೆಗೆಸುತ್ತೇವೆ ಎಂಬೆಲ್ಲ ರೀತಿಯಲ್ಲಿ ಪೊಲಿಸ್ ಪೇದೆ ಪಿ ಸಿ ಪಾಟೀಲ್ ಗೆ ಬೆದರಿಕೆಗಳು ಆರಂಭವಾಗಿದ್ದವು. ಇದರಿಂದ ಮರ್ಯಾದೆಗೆ ಅಂಜಿ ಸಾಕಷ್ಟು ಬಾರಿ ಅದೆ ಠಾಣೆಯ ಪೊಲಿಸ್ ಸಿಬ್ಬಂದಿಗಳಿಗೂ ತಿಳಿಸಿದ್ದರು.ಆದರೂ ಪ್ರಯೋಜನ ವಾಗಿರಲಿಲ್ಲ.

ಇವರ ಕಿರುಕುಳ ದಿಂದ ಹೆದರಿ ಹೈರಾಣಾಗಿದ್ದ ಪೊಲಿಸ್ ಪೇದೆ ಪಿ ಸಿ ಪಾಟೀಲ್ ನ ಸ್ಥಿತಿ ದುರುಪಯೋಗ ಪಡೆದು ಆತನ ಬಳಿಯಿಂದ ಕೆಲವು ಮಧ್ಯವರ್ತಿಗಳು ಪತ್ರಕರ್ತರು, ಮತ್ತು ಅದೆ ಠಾಣೆಯ ಪೊಲಿಸರು ಸಾಕಷ್ಟು ಹಣವನ್ನು ಪಿಕಿದ್ದರು. ಇವರ ಮಿಲಿ ಭಗತ್ ತಂಡದಿಂದ ಸತತವಾಗಿ ನೊಂದಿದ್ದ ಪೊಲಿಸ್ ಪೆದೆ ಪಿ ಸಿ ಪಾಟೀಲ್ ಇದೆ ಮಾರ್ಚ್ 16ರಂದು ಡೆತ್ ನೋಟ್ ಬರೆದು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಸಾಂದರ್ಭಿಕ ಚಿತ್ರ

ಆದರೆ ಖಾಸಗಿ ಪತ್ರಿಕೆಯ ಗಿರೀಶ್ ಕುಲಕರ್ಣಿ ಮತ್ತು ಭಿಮನ ಗೌಡ್ ಪಾಟೀಲ್ ಗೆ ಅನುಕೂಲ ವಾಗುವ ರೀತಿಯಲ್ಲಿ ಈ ಎಲ್ಲ ಮಾಹಿತಿ ನಿಡುತ್ತಿದ್ದದ್ದೆ ಅದೆ ಪೊಲಿಸ್ ಠಾಣೆಯ ಎ ಎಸ್ ಐ ಪುಟ್ಟಪ್ಪ ಕೌಜಲಗಿ ಮತ್ತವರ ತಂಡ. ಸದ್ಯಕ್ಕೆ ದೂರು ದಾಖಲಿಸಿಕೊಂಡು ತನಿಖೆ ನಡೆಸಿರುವ ಪೊಲಿಸರು ಈ ಒಂಬತ್ತು ಜನರನ್ನು ವಶಕ್ಕೆ ಪಡೆದಿದ್ದಾರೆ.

1)ಪುಟ್ಟಪ್ಪ ಕೌಜಲಗಿ,
ಪೊಲಿಸ್ ಕಾನ್ಸ್‌ಟೇಬಲ್ ಗಳಾದ ,
2)ಸಿ ಆರ್ ನಾಯಕ, 3)ದಾದಾಪೀರ ಮಂಜಲಾಪೂರ,

4)ಶರಣಪ್ಪ ಅಂಗಡಿ,
5)ಅಂದಪ್ಪ ಹಣಜಿ

ಮತ್ತು ಪತ್ರಕರ್ತರಾದ
6)ಭೀಮನ ಗೌಡ ಪಾಟೀಲ್, 7)ಗಿರೀಷ್ ಕುಲಕರ್ಣಿ ಹಾಗೂ ಹಣಡಬ್ಲೀಂಗ್ ಆರೋಪಿ 8)ವಿಠ್ಠಲ ಹಬೀಬ್ ಹಾಗೂ 9)ಗುರುರಾಜ್ ತಳ್ಳಿಹಾಳ ಸೇರಿದಂತೆ ಒಟ್ಟು ಒಂಬತ್ತು ಜನರ ವಿರುದ್ಧ ಬ್ಲ್ಯಾಕ್ ಮೇಲ್,ಕರ್ತವ್ಯಕ್ಕೆ ಅಡ್ಡಿ ಮತ್ತು ಮಾನಸಿಕ ಕಿರುಕುಳ ನೀಡಿರುವ ಹಿನ್ನೆಲೆಯಲ್ಲಿ ಮೃತ ಪೊಲಿಸ್ ಪೇದೆಯ ಕುಟುಂಬಸ್ಥರು ಡೆತ್ ನೋಟ್ ಸಮೇತ ಗದಗ ಗ್ರಾಮೀಣ ಪೊಲಿಸ್ ಠಾಣೆಗೆ ದೂರು ನಿಡಿದ್ದಾರೆ.

ಇನ್ನೂ ಗದಗ ಗ್ರಾಮೀಣ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲಿಸರು ತನಿಖೆ ಮುಂದು ವರೆಸಿದ್ದಾರೆ.

Related Articles

Leave a Reply

Your email address will not be published. Required fields are marked *