ಸ್ಥಳೀಯ ಸುದ್ದಿ

ನೋವಿನ ನಡುವೆಯೂ ಮಾಡಲಿಂಗ್ ನಲ್ಲಿ ಸಾಧನೆ

ಧಾರವಾಡ

ಕಡುಬಡತನದಲ್ಲಿ ಬೆಳೆದ ಯುವತಿಯೊಬ್ಬಳು ಧಾರವಾಡದಲ್ಲಿ ಅಷ್ಟೇ ಅಲ್ಲದೇ ರಾಜ್ಯಮಟ್ಟದಲ್ಲಿಯೂ ಮಾಡಲಿಂಗನಲ್ಲಿ ಸಾಧನೆ ಮಾಡಿ ತೋರಿಸಿದ್ದಾರೆ. ಅವರೇ ನಮ್ಮ ಧಾರವಾಡದ ಗೀತಾ ಚಿಕ್ಕಮಠ.

ಧಾರವಾಡದ ಶಿವಗಿರಿ ನಿವಾಸಿಯಾಗಿರುವ ಇವರಿಗೆ ಮಾಡಲಿಂಗ್ ಅಂದ್ರೆ ಎಲ್ಲಿಲ್ಲದ ಆಸಕ್ತಿ. ತನ್ನ ತಾಯಿಯನ್ನು‌ ಕಳೆದುಕೊಂಡ ನೋವಿನ ನಡುವೆಯೂ ಮಾಡಲಿಂಗ್ ಕ್ಷೇತ್ರದಲ್ಲಿ ಸಾಧನೆ ಮಾಡಿ ಸೈ ಎನಿಸಿಕೊಂಡಿದ್ದಾರೆ.

ಸದ್ದಿಲ್ಲದೆ ಸಾಧನೆ ಮಾಡುತ್ತಿರುವ ಗೀತಾ ಚಿಕ್ಕಮಠ ಅವರಿಗೆ ಎರಡು ರಾಜ್ಯ ಪ್ರಶಸ್ತಿ ಲಭಿಸಿವೆ.‌

ಇವರು ಧಾರವಾಡ ಶಹರದ ಶಿವಗಿರಿಯ ನಿವಾಸಿ ತಂದೆ ಆನಂದಯ್ಯ ತಾಯಿ ಬಸವಣ್ಣೇವ್ವ ಇವರ ಮೂರನೆ ಮಗಳಾಗಿ ದಿನಾಂಕ 15 / 07 / 1987 ರಲ್ಲಿ ಜನಿಸಿದ ಇವರಿಗೆ ಬಡತನ, ವಿದ್ಯಾಬ್ಯಾಸಕ್ಕೆ ಅಡಚಣೆ ಉಂಟುಮಾಡಿತ್ತು. ತಮ್ಮ ತಂದೆಯ ಕಷ್ಟದ ಜೀವನದ ನಡುವೆ ತಮ್ಮದೆ ಆದ ಬದುಕನ್ನ ಕಟ್ಟಿಕೊಳ್ಳಬೇಕೆಂದು ಇಚ್ಚೆ ಹೊಂದಿದ್ದರು ಗೀತಾ ಚಿಕ್ಕಮಠ.
ಇವರ ತಂದೆ ಆನಂದಯ್ಯ ಮೊದಲನೆ ಮಗಳನ್ನ ಸಿಎ ಮಾಡಿಸಿ ನಂತರ ಮಗನನ್ನು ಬಿಎ ಬಿಕಾಂ ಮಾಡಿಸಿದರು ಗೀತಾ ಚಿಕ್ಕಮಠ್ ಅವರು ಕೂಡಾ ಬಿಕಾಂ ಪದವಿಯನ್ನು ಹೊಂದಿರುತ್ತಾರೆ.

ಅವರು ಒಳ್ಳೆಯ ವಿಧ್ಯಾಭ್ಯಾಸ ಹೊಂದಿದರು ಸಹ ತಮ್ಮದೆ ಆದ ರೀತಿಯಲ್ಲಿ ಸಾಧನೆ ಮಾಡಬೇಕೆಂಬ ಹೆಬ್ಬಯಕೆಯಿಂದ ಮಾಡ್ಲಿಂಗ್ ಆಯ್ಕೆ ಮಾಡಿಕೊಂಡ್ರು.

ತಾಯಿ ಕಳೆದುಕೊಂಡ ನೋವನ್ನು ನೆನೆಯುತ ಮತ್ತೆ ಮಾಡ್ಲಿಂಗ್ ನಲ್ಲಿ ಸಾಧನೆ ಮಾಡುತ್ತಾ ಮುಂದೆ ಸಾಗಿದ ಇವರಿಗೆ, ಸಾಕಷ್ಟು ವೇದಿಕೆಯಲ್ಲಿ ಬಾಗವಹಿಸುತ್ತಾ ಹಲವಾರು ನೋವನ್ನು ಕಂಡರೂ ಸಹ ಛಲ ಬಿಡದೇ ನಿರಂತರ ಪ್ರಯತ್ನಲ್ಲಿ ಮತ್ತೆ ತಂದೆ ಕಳೆದುಕೊಂಡು ಎಲ್ಲಿಲ್ಲದ ನೋವನ್ನು ಭರಿಸುತ್ತಾರೆ.

ತಂದೆಯ ನೆನಪಿನಲ್ಲಿ ಮಾಡ್ಲಿಂಗ್ ಆಶೆಯನ್ನು ಬಿಟ್ಟುಬಿಡುವ ನಿರ್ಧಾರ ತೆಗೆದುಕೊಳ್ಳುವ ಸಮಯದಲ್ಲಿ ಕುಟುಂಬದವರು ಮತ್ತು ತಮ್ಮ ಗೆಳತಿಯರು ದೈರ್ಯ ತುಂಬುತ್ತಾ ಮತ್ತೆ ಮಾಡ್ಲಿಂಗ್ ನಲ್ಲಿ ಮುಂದೆವರಿಯುತ್ತಾರೆ .

ಗೋವಾ ರಾಜ್ಯದಲ್ಲಿ ಡಿಸೆಂಬರ್ ನಲ್ಲಿ ನಡೆದ ಸಿ ವೈಫ್ಸ್ ಫ್ಯಾಶನ್ ಇವೇಂಟ್ಸನಲ್ಲಿ ಭಾಗವಹಿಸಿ 2ನೇ ಸ್ಥಾನ ರನ್ನರ್ ಆಫ್ ಆಗಿ ಕ್ರೌನ್ ಪಡೆಯುತ್ತಾರೆ .

ಹುಬ್ಬಳ್ಳಿಯಲ್ಲಿ ನಡೆದ ಇವೇಂಟ್ಸನಲ್ಲಿ ಭಾಗವಹಿಸಿ ಮಿಸ್ ಗದಗ ಕಿರೀಟವನ್ನು ತಮ್ಮಮುಡಿಗೇರಿಸಿಕೊಂಡಿದ್ದಾರೆ

ಗೀತಾ ಚಿಕ್ಕಮಠ ಅವರಿಗೆ

  1. ಎಸ್ ಎಸ್ ಕಲಾ ಸಂಗಮ ಬೆಂಗಳೂರ ರಾಜ್ಯ ಮಟ್ಟದ ಮಹಿಳಾ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
  2. ಬೆಂಗಳೂರಿನ ಕೆ ಎಸ್ ಚಾನಲ್ ನವರು ಕನ್ನಡ ಕಣ್ಮಣಿ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ ಮತ್ತೆ ಹಲವಾರು ಇವೇಂಟ್ಸ್ ಗಳಲ್ಲಿ ನಿರ್ಣಾಯಕರಾಗಿ ತಮ್ಮ ನಿರ್ಣಾಯಕತ್ವವನ್ನು ನಿರ್ವಹಿಸುತ್ತಾ ಬಂದಿದ್ದಾರೆ.
    ಸಾಕಷ್ಟು ವೇದಿಕೆಯಲ್ಲಿ ತಮ್ಮದೆ ರೀತಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಾ ಬಂದಿರುವ ಗೀತಾ ಚಿಕ್ಕಮಠ ಅವರಿಗೆ ಇನ್ನೂ ಹೆಚ್ಚಿನ ಪ್ರಶಸ್ತಿಗಳು ಹರಸಿ ಬರಲಿ ಎಂಬುವುದು ನಮ್ಮ ಹಾರೈಕೆ.

ಹೀಗೆ ಕಷ್ಟದ ಜೀವನಗಳಲ್ಲಿಯೂ ಸಾಧನೆ ಮಾಡುತ್ತಾ ಬಂದಿರುವ ಇವರಿಗೆ ಜನ್ಮದಿನದ ಶುಭಾಶಯಗಳು

Related Articles

Leave a Reply

Your email address will not be published. Required fields are marked *