ವಿದ್ಯಾನಗರದ ಆರ್ಟ್ಸಕಾಲೆಜು ಎದುರು ಇರುವ ಸಾರ್ವಜನಿಕ ಪ್ರದೇಶದ ನಡುವೆ ಪಾಲಿಕೆಯ ನಿಯಮ ಬಾಹಿರ ವಾಗಿ ನಿರ್ಮಿಸಿದ್ದ “ಫೂಡ್ಸ್ ವಿಲ್ಲಾ ” ವನ್ನು ಇಂದು ಬೆಳಿಗ್ಗೆ ಜೆಸಿಬಿ ಯೊಂದಿಗೆ ಆಗಮಿಸಿದ್ದ ಪಾಲಿಕೆ ಅಧಿಕಾರಿಗಳು ಕಾರ್ಯಾಚರಣೆಗೆ ಇಳಿಯುತ್ತಿದ್ದಂತೆ ಜೆಸಿಬಿ ಸದ್ದಿಗೆ ಎಚ್ಚೆತ್ತ ಮಳಿಗೆಗಳ ಮಾಲಿಕರು ತಮ್ಮ ಅಂಗಡಿಯಲ್ಲಿ ನ ವಸ್ತುಗಳನ್ನು ಸ್ಥಳಾಂತರ ಮಾಡಿಕೊಂಡರು.
ನಮ್ಮ ಸುದ್ದಿಗಾರರೊಂದಿಗೆ ಮಾತನಾಡಿದ ಪಾಲಿಕೆಯ ಅಧಿಕಾರಿಗಳು ಇ ಹಿಂದೆಯೇ ಐದು ಬಾರಿ ನೊಟೀಸ್ ನಿಡಿದ್ದೇವೆ ಮತ್ತು ಇ ಹಿಂದೆ ಇದ್ದ ಕಟ್ಟಡದ ಪರವಾನಗೆಯ ಅಳತೆ ಮೀರಿ ದೊಡ್ಡದಾದ ಶೆಡ್ ನಿರ್ಮಾಣ ಮಾಡಿದ್ದರು.ಇ ಕುರಿತು ಹಲವು ಬಾರಿ ತಿಳಿಸಿದರು ಮಾಲಿಕರು ಕ್ರಮ ಕೈಗೊಳದೆ ಇರುವಾಗ. ಇಂದು ಕಟ್ಟಡ ನಿರ್ಮಾಣಕ್ಕೆ ಪಡೆದಿರುವ ಅಳತೆ ಹೊಂದಿರುವ ಜಾಗ ಹೊರತುಪಡಿಸಿ ಇನ್ನುಳಿದ ಎಲ್ಲವನ್ನೂ ತೆರವು ಗೊಳಿಸಲಾಗುವುದು ಎಂದರು.
ಪವರ್ ಸಿಟಿ ನ್ಯೂಸ್ ಹುಬ್ಬಳ್ಳಿ