ಬೈಲಹೊಂಗಲ್
ಬೆಳಗಾವಿ ಜಿಲ್ಲೆಯ ಬೈಲಹೊಂಗಲ್ ತಾಲೂಕಿನ ನಯಾನಗರದಲ್ಲಿ ಸಂಭ್ರಮದ ಕಾರ್ತಿಕೋತ್ಸವ ಕಾರ್ಯಕ್ರಮ ನಡೆಯಿತು.
ನಯಾನಗರ ಗ್ರಾಮದ ಶ್ರೀ ಸುಖದೇವಾದ ಮಠದ ಆವರಣದಲ್ಲಿ ಕೊನೆಯ ಕಾರ್ತಿಕದ ಅಂಗವಾಗಿ ಸಾವಿರಾರು ಮಂದಿ ಭಕ್ತರು ಆಗಮಿಸಿ ದೀಪ ಬೆಳಗಿಸಿದ್ರು.
ಈ ಬಾರಿ ಕಾರ್ತಿಕೋತ್ಸವದ ವಿಶೇಷ ಅತಿಥಿಯಾಗಿ ಮಾಜಿ ಸಚಿವ ವಿನಯ ಕುಲಕರ್ಣಿ ಅವರು ಆಗಮಿಸಿದ್ದರು.
ಕಾರ್ತಿಕೋತ್ಸವದ ದಿವ್ಯ ಸಾನಿಧ್ಯವನ್ನು ನಯಾನಗರ ಸುಕ್ಷೇತ್ರದ ಸುಖದೇವಾನಂದ ಮಠದ ಶ್ರೀ ಅಭಿನವಸಿದ್ದಲಿಂಗ ಮಹಾ ಸ್ವಾಮೀಜಿ ವಹಿಸಿದ್ದರು.
ಮಠಕ್ಕೆ ಆಗಮಿಸಿದ ಮಾಜಿ ಸಚಿವ ವಿನಯ ಕುಲಕರ್ಣಿ ಅವರು ಗದ್ದುಗೆಗೆ ಮಾಲಾರ್ಪಣೆ ಮಾಡಿ ದೇವಸ್ಥಾನದ ಕಾರ್ತಿಕೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾದ್ರು.
ಇದೇ ಸಂದರ್ಭದಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಇದೇ ವೇಳೆ ಮಾತನಾಡಿದ ಮಾಜಿ ಸಚಿವ ವಿನಯ ಕುಲಕರ್ಣಿ ಅವರು ಮಾತನಾಡಿ, ನಾನು ಕಾರ್ತಿಕೋತ್ಸವದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ಅತ್ಯಂತ ಖುಷಿ ಕೊಟ್ಟಿದೆ. ನಾನು ಮೊದಲಿನಿಂದಲೂ ಮಠಕ್ಕೆ ಆಗಮಿಸುತ್ತಿರುವೆ. ಈ ಕಾರ್ತಿಕೋತ್ಸವದಲ್ಲಿ ಹಚ್ಚಿದ ದೀಪದಿಂದ ನಿಮ್ಮೆಲ್ಲರಿಗೆ ಒಳ್ಳೆಯದಾಗಲಿ . ಸತ್ಯಕ್ಕೆ ಜಯ ಸಿಗುವುದು ತಡವಾಗುತ್ತೆ. ಆದ್ರೆ ನ್ಯಾಯ ಖಂಡಿತವಾಗಿಯು ಸಿಗುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ರು.
ದಿವ್ಯ ಸಾನಿಧ್ಯವನ್ನು ವಹಿಸಿದ್ದ ಶ್ರೀ ಅಭಿನವ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ನನ್ನ ಪಟ್ಟಾಧಿಕಾರದಿಂದ ಹಿಡಿದು ಮಠಕ್ಕೆ ವಿನಯ ಕುಲಕರ್ಣಿ ಅವರು ನಡೆದುಕೊಂಡು ಬಂದಿದ್ದಾರೆ.
ಕ್ಷೇತ್ರದ ಪ್ರತಿಯೊಬ್ಬರನ್ನು ಹೆಸರು ಹಿಡಿದು ಮಾತನಾಡಿಸುವ ವಿನಯ ಕುಲಕರ್ಣಿ ಅವರು ಸಚಿವರು ಇದ್ದಾಗ ಕೂಡ, ಡೇರಿಯಲ್ಲಿ ಕೆಲಸ ಮಾಡುವುದನ್ನ ನಾನು ನೋಡಿದ್ದೇನೆ. ಅವರ ಸರಳತೆ ಅವರನ್ನು ಯಾವತ್ತಿಗೂ ಕಾಪಾಡುತ್ತೆ. ನಯಾನಗರ ಮಠದ ಆರ್ಶಿವಾದ ಯಾವತ್ತಿಗೂ ವಿನಯ ಕುಲಕರ್ಣಿ ಅವರ ಜೋತೆಗೆ ಇರುತ್ತೆ.
ನಯಾನಗರ ಮಠದ ಗದ್ದುಗೆ ಆರ್ಶೀವಾದ ಮಠ ಬೆಳೆಯಲು ಸಾಕ್ಷಿಯಾಗಿದೆ ಎಂದು ಸ್ವಾಮೀಜಿ ಹೇಳಿದ್ರು.
ಚಿಕ್ಕಮಕ್ಕಳಿಂದ ಹಿಡಿದು ಹಿರಿಯರು, ಹೊಸದಾಗಿ ಮದುವೆಯಾದ ನವದಂಪತಿಗಳು, ಸೇರಿದಂತೆ ಸುತ್ತಮುತ್ತಲಿನ ಸಾವಿರಾರು ಭಕ್ತರು ಮಠದ ಕಾರ್ತಿಕೋತ್ಸವದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.