ನಡೆದಾಡುವ ದೈವಿ ಸ್ವರೂಪದ ಶಕ್ತಿ ಈ ಶ್ರೀಗಳು.
ಬೆಂಗಳೂರು
ನಮ್ಮ ಪಾಲಿಗೆ ಏನೇ ಸಮಸ್ಯೆ ಬಂದ್ರೂ ನಾವು ಹೋಗುವುದು ಮೊದಲು ದೇವಸ್ಥಾನಕ್ಕೆ.
ಸಂಕಟ ಬಂದಾಗ ವೆಂಕಟರಮಣ ಅಂತೇವಿ..
ಆದ್ರೆ ಇಲ್ಲೊಬ್ಬರು ದೈವಿ ಶಕ್ತಿಯ ಸ್ವರೂಪದ ಪೂಜ್ಯರು ಇದ್ದಾರೆ.
ರಾಜ್ಯದ 12 ಮಠಗಳಿಗೆ ಪೀಠಾಧಿಪತಿಯಾಗಿರುವ ಇವರು ಭಕ್ತರಲ್ಲಿ ಕಾಣುವ ಪ್ರೀತಿ ಅಪಾರವಾದದ್ದು.
ಅದೇಷ್ಟೇ ಜನಸಾಗರವೇ ಇರಲಿ ಪ್ರತಿಯೊಬ್ಬರನ್ನು ಹೆಸರಿಡಿದು ಮಾತನಾಡಿಸುವ ಶಕ್ತಿ ಸ್ವಾಮೀಜಿಗಿದೆ.
ಕಠಿಣ ತಪಸ್ಸು ಮಾಡಿ, ಜನಮಾನಸದಲ್ಲಿ ನಡೆದಾಡುವ ದೈವಿ ಶಕ್ತಿ ಇವರಲ್ಲಿದೆ.
ಪ್ರತಿ ಅಮವಾಸ್ಯೆಯ ದಿನ ಒಂದಕ್ಕೆ 6 ರಿಂದ 7 ಸಾವಿರ ಭಕ್ತರಿಗೆ ಇವರು ದರ್ಶನ ಭಾಗ್ಯ ಕೊಡುವುದರ ಜೋತೆಗೆ ಅವರ ಸಮಸ್ಯೆಯನ್ನು ಬಗೆಹರಿಸಿಕೊಡುತ್ತಾರೆ.
ಅವರೇ ಬೆಳಗಾವಿ ಜಿಲ್ಲೆಯ ಬೈಲಹೊಂಗಲ್ ತಾಲೂಕಿನ ನಯಾನಗರ ಸುಕ್ಷೇತ್ರದ ಶ್ರೀ ಸುಖದೇವಾದ ಮಠದ ಶ್ರೀ ಶ್ರೀ ಶ್ರೀ ಅಭಿನವ ಸಿದ್ದಲಿಂಗ ಮಹಾಸ್ವಾಮೀಜಿ.
ಇವರು ಕುದುರೆ ಓಡಿಸುತ್ತಾರೆ. ಡ್ರೈವರ್ ಇಲ್ಲಾ ಅಂದ್ರೆ ಕಾರ್ ಓಡಿಸುತ್ತಾರೆ. ಸಾಲದಕ್ಕೆ ಮಠಕ್ಕೆ ಭಕ್ತರು ಬಂದಾಗ ಅಡುಗೆ ಮಾಡುವಾತ ಇಲ್ಲದೇ ಹೋದ್ರೆ ತಾವೇ ಅಡುಗೆ ಮಾಡಿ ಪ್ರಸಾದ ಮಾಡಿಸುತ್ತಾರೆ. ಅಷ್ಟೊಂದು ಸರಳತೆ ಇದೆ ಈ ದೈವಿ ಸ್ವರೂಪದ ಶ್ರೀಗಳಿಗೆ.
ಇವರು ರಸ್ತೆ ಮೇಲೆ ಬಂದ್ರೆ ಸಾಕು ಜನಸಾಗರವೇ ಇರುತ್ತೆ.
ಜಾತಿ- ಮತಗಳ ಮೇಲುಕೀಳು ಯಾವತ್ತಿಗೂ ನೋಡುದಿಲ್ಲಾ ಶ್ರೀಗಳು..
ಎಲ್ಲಾ ಭಕ್ತರ ಮನೆಗೆ ಹೋಗ್ತಾರೆ ಸ್ವಾಮೀಜಿ..ಸರಳತೆಯ ಸ್ವಾಮೀಜಿಗೆ ನಮ್ಮದೊಂದು ಅಭಿಮಾನದ ನಮನ