ಸ್ಥಳೀಯ ಸುದ್ದಿ
ಧಾರವಾಡ ಗ್ರಾಮೀಣದಿಂದ ಪಕ್ಷೇತರ ಅಭ್ಯರ್ಥಿಯಾಗಿ ಬಸವರಾಜ ಕೊರವರ್ ಎಂಟ್ರಿ
ಧಾರವಾಡ
ಜನಜಾಗೃತಿ ಸಂಘದ ಸಂಸ್ಥಾಪಕ ಅಧ್ಯಕ್ಷ ಬಸವರಾಜ ಕೊರವರ್ ರಾಜಕೀಯಕ್ಕೆ ಧುಮಕಿದ್ದು, ಈ ಬಾರಿ ನಡೆಯುತ್ತಿರುವ ವಿಧಾನಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಫರ್ಧೆ ಮಾಡಲು ಇಚ್ಚಿಸಿದ್ದಾರೆ.
ಶನಿವಾರ ಇಂದು ಶಿವಳ್ಳಿ ಗ್ರಾಮದ ಶಕ್ತಿ ದೇವತೆಗೆ ಪೂಜೆ ಸಲ್ಲಿಸಿ ಚುನಾವಣೆ ಪ್ರಚಾರಕ್ಕೆ ಚಾಲನೆ ನೀಡಿದ್ರು.
ಜನಜಾಗೃತಿ ಸಂಘದ ಮೂಲಕ ತಮ್ಮದೇ ವರ್ಚಸು ಹೊಂದಿರುವ ಬಸವರಾಜ ಕೊರವರ್ ಬಿಜೆಪಿಯಿಂದ ಟಿಕೆಟ್ ಬಯಸಿದ್ದರು.
ಆದ್ರೆ ಪಕ್ಷದಿಂದ ಟಿಕೆಟ್ ಕೊಡದೇ ಇರುವ ಹಿನ್ನೆಲೆಯಲ್ಲಿ ಬಡವರ ಮಕ್ಕಳು ಬೆಳೆಯಬೇಕೆಂದು ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆ ಎದುರಿಸಲು ಸಿದ್ಧತೆ ನಡೆಸಿದ್ದಾರೆ.