ಸ್ಥಳೀಯ ಸುದ್ದಿ
ಧಾರವಾಡದ ಯುವಜನೋತ್ಸವ ಅರಬಿಂದೋ ಸೊಸೈಟಿಯಿಂದ 7000 ಪುಸ್ತಕ ಕೊಡುಗೆ.
ಧಾರವಾಡ
ಇದೇ ತಿಂಗಳು 12 ರಂದು ಧಾರವಾಡದಲ್ಲಿ ನಡೆಯುತ್ತಿರುವ 26 ನೆಯ ರಾಷ್ಟ್ರೀಯ ಯುವಜನೋತ್ಸವಕ್ಕೇ ಶ್ರೀ ಅರಬಿಂದೋ ಸೊಸೈಟಿಯಿಂದ “A Call to the youth of India” ಎಂಬ ಪುಸ್ತಕದ 7000 ಪ್ರತಿಗಳನ್ನು ವಿತರಿಸಲು ಶ್ರೀ ಅರಬಿಂದೋ ಸೊಸೈಟಿಯ ಟ್ರಸ್ಟಿಗಳಾದ ಶ್ರೀ ಅಯ್ಯಪ್ಪ ದೇಸಾಯಿ ಅವರು ಕೇಂದ್ರ ಸಚಿವರಾದ ಶ್ರೀ ಪ್ರಹ್ಲಾದ ಜೋಶಿ ಅವರ ಸಮ್ಮುಖದಲ್ಲಿ ಜಿಲ್ಲಾಡಳಿತಕ್ಕೆ ಪುಸ್ತಕಗಳನ್ನು ಹಸ್ತಾಂತರಿಸಿದರು.
ಈ ಸಂಧರ್ಭದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಜಗದೀಶ ಶೆಟ್ಟರ್, ಸಚಿವರಾದ ಶ್ರೀ ಶಂಕರ ಪಾಟೀಲಮುನೇನಕೊಪ್ಪ, ಶಾಸಕರಾದ ಶ್ರೀ ಅರವಿಂದ ಬೆಲ್ಲದ, ಬಯಲು ಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಶ್ರೀ ತವನಪ್ಪ ಅಷ್ಟಗಿ ಹಾಗೂ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ಜಿಲ್ಲಾ ಅಧೀಕ್ಷಕರು ಉಪಸ್ಥಿತರಿದ್ದರು.