ದೀಪದ ಕೆಳಗೆ ಕತ್ತಲು
ಬೆಂಗಳೂರು
ಪ್ರಧಾನಿ ಮೋದಿ ಅವರು ಸ್ವಚ್ಚ ಭಾರತಕ್ಕೆ ಮೊದಲ ಆದ್ಯತೆ ಕೊಟ್ಟು ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿ ಮಾಡಲು ಎಲ್ಲೇಡೆ ದೇಶಾದ್ಯಂತ ಜಾಗೃತಿ ಮೂಡಿಸುತ್ತಿದ್ದಾರೆ.
ಆದ್ರೆ ಸ್ಮಾರ್ಟ ಸಿಟಿಗಳಲ್ಲಿ ಒಂದಾದ ಹುಬ್ಬಳ್ಳಿ ಧಾರವಾಡ ಅವಳಿನಗರದ ಶಕ್ತಿ ಕೇಂದ್ರ ಮಹಾನಗರ ಪಾಲಿಕೆಯಲ್ಲಿ ಮಾತ್ರ ಇದು ತದ್ವಿರುದ್ದವಾಗಿದೆ.
ಧಾರವಾಡದ ಪಾಲಿಕೆಯ ನಗರ ಯೋಜನಾ ಶಾಖೆ ಮುಂದೆ ಒಂದು ರೌಂಡ್ ಹೋಗಿ ಬಂದ್ರೆ ಸಾಕು ಕಸದ ರಾಶಿಯೇ ಕಾಣುತ್ತೆ. ಸಾಲದಕ್ಕೆ ಎಲೆಅಡಿಕೆ ಹಾಕಿ ಉಗುಳಿರುವ ಗೋಡೆಯ ಕಲೆಗಳು ಸಿಬ್ಬಂದಿ ಹೀಗೆನಾ ಅಥವಾ ಕಚೇರಿಗೆ ಬರುವವರು ಹೀಗೆನಾ? ಎನ್ನುವ ಅನುಮಾನ ಕಾಡುತ್ತೆ.
ಸಹಾಯಕ ಆಯುಕ್ತರಾದ ಆರ್.ಎಂ.ಕುಲಕರ್ಣಿಯವರು ನಿತ್ಯ ಇದೇ ಕಚೇರಿಗೆ ಬಂದು ಹೋಗುತ್ತಿದ್ದರೂ, ಈ ಅವ್ಯವಸ್ಥೆ ಸರಿ ಮಾಡುವ ಗೋಜಿಗೂ ಅವರು ಹೋಗಿಲ್ಲಾ.
ನಗರ ಯೋಜನಾ ಶಾಖೆ ಮೆಟ್ಟಿಲುಗಳನ್ನು ಏರುತ್ತಾ ಹೋದ್ರೆ ಸಾರ್ವಜನಿಕರು ಇದೇನು ಸರ್ಕಾರಿ ಕಚೇರಿಯಾ ಇಲ್ಲಾ ಕೊಳಚೆ ಪ್ರದೇಶನಾ ಎನ್ನುವಂತೆ ಮೂಗು ಮುಚ್ಚಿಕೊಂಡು ಹೋಗುವ ಸನ್ನಿವೇಶವೂ ಇದೆ.
ಕಟ್ಟಡದ ಮೇಲ್ಬಾಗ ಶಿಥಾಲಾವ್ಯಸ್ಥೆ ಇದ್ದು, ಇದು ಕೂಡ ಅಪಾಯಕ್ಕೆ ಆಹ್ವಾನ ಕೊಡುತ್ತಿದೆ.
ಪ್ಲಾಸ್ಟಿಕ್ ಮುಕ್ತ ಅವಳಿನಗರ ಮಾಡಲು ಪಾಲಿಕೆಯಲ್ಲಿಯೇ ಪ್ಲಾಸ್ಟಿಕ್ ಬಳಕೆ ಇರುವುದನ್ನು ನೋಡಿದ್ರೆ ಬೇಲಿಯೇ ಎದ್ದು ಹೊಲ ಮೇಯ್ದಂತೆ ಆಗಿದೆ.
ಈ ಅವ್ಯವಸ್ಥೆಯ ಆಗರಕ್ಕೆ ಮೇಯರ್ ಅಂಚಟಗೇರಿ ಅವರು ಯಾವ ರೀತಿ ಬಿಸಿ ಮುಟ್ಟಿಸುತ್ತಾರೆ ನೋಡಬೇಕಿದೆ.
ಪವರ್ ಸಿಟಿ
ನ್ಯೂಸ್ ಕನ್ನಡ ಇದು ಸತ್ಯ ಸದಾಕಾಲ