ಧಾರವಾಡಸ್ಥಳೀಯ ಸುದ್ದಿಹುಬ್ಬಳ್ಳಿ

ಡಿಮ್ಹಾನ್ಸ ಮುಂದಿನ ವಿದ್ಯುತ್ ದೀಪ ಸರಿಪಡಿಸಲಾಗುವುದು – ಕೆಇಬಿ ಕಾರ್ಯನಿರ್ವಾಹಕ ಅಭಿಯಂತರ ಗೋಕುಲ್ ಸ್ಪಷ್ಟನೆ

ಧಾರವಾಡ

ಧಾರವಾಡ ನಗರದಲ್ಲಿರುವ ಡಿಮ್ಹಾನ್ಸ ಆಸ್ಪತ್ರೆಗೆ ನಿತ್ಯ ‌ಸಾವಿರಾರು ರೋಗಿಗಳು ಹೊರ ಜಿಲ್ಲೆಗಳಿಂದ ಆಗಮಿಸುತ್ತಾರೆ.

ಇಲ್ಲಿ ಆಸ್ಪತ್ರೆಗೆ ಬರುವ‌ ರೋಗಿಯ ಸಂಬಂಧಿಕರಿಗೆ ಬಹುತೇಕ ಮಂದಿಗೆ ರಾತ್ರಿಯಾದ್ರೆ ಸಾಕು‌ ರಸ್ತೆ ಮುಂದೆ ಹೋದ್ರೆ ಎಲ್ಲಿ ಅಪಘಾತಗಳು ಆಗುತ್ತವೆ ಎನ್ನುವ ಆತಂಕ ಕಾಡುತ್ತೆ.

ಡಿಮಾನ್ಸ ಆಸ್ಪತ್ರೆ ಮುಂದೆಯೇ ಉಪನಗರ ಪೊಲೀಸ್ ಠಾಣೆ ಇದ್ದರೂ ಕೂಡ ಅಲ್ಲಿಯೂ ಇದೇ ಕತ್ತಲೆಯ ಸಮಸ್ಯೆ ಆಗಿದೆ.

ಮುಖ್ಯವಾಗು ಅಪಘಾತಗಳು ಹೆಚ್ಚಾಗಲು ಕಾರಣವಾಗಿರುವುದು ವಿದ್ಯುತ್ ದೀಪಗಳು ಇಲ್ಲದೇ ಇರುವುದು.‌

ಹೀಗಾಗಿ ಈ‌ ಬಗ್ಗೆ ಪಾವರ್ ಸಿಟಿ ನ್ಯೂಸ್ ಕನ್ನಡ ಕತ್ತಲೆಯಾದ್ರೆ ಸಾಕು ಡಿಮಾನ್ಸ ‌ಮುಂದೆ ಹೆಚ್ಚುತ್ತಿವೆ ಅಪಘಾತಗಳು ಎಂದು ವರಿದಿ ಪ್ರಕಟಿಸಿತ್ತು.

ಇದಕ್ಕೆ ಸ್ಪಂದಿಸಿದ ಧಾರವಾಡ ಜಿಲ್ಲೆಯ‌ ಕೆಇಬಿ EE (ಕಾರ್ಯನಿರ್ವಾಹಕ ಅಭಿಯಂತರ) ಗೊಕುಲ್ ಅವರು ಹೆದ್ದಾರಿ ಪ್ರಾಧಿಕಾರದ ಜೋತೆಗೆ ಮಾತನಾಡಿಕೊಂಡು ಸಾರ್ವಜನಿಕರಿಗೆ ತೊಂದ್ರೆ‌ ಆಗದಂತೆ‌ ನೋಡಿಕೊಳ್ಳುವುದು ನಮ್ಮ‌ ಕೆಲಸ ಆದಷ್ಟು ಬೇಗನೇ ಸರಿ ಮಾಡುತ್ತೇವೆ ಸಮಸ್ಯೆಯನ್ನು ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.

Related Articles

Leave a Reply

Your email address will not be published. Required fields are marked *