ಸ್ಥಳೀಯ ಸುದ್ದಿ
ಬಡತನದಲ್ಲಿಯೂ ಕಷ್ಟಪಟ್ಟು ಯುಪಿಎಸ್ಸಿ ಪಾಸಾದ ಅಣ್ಣಿಗೇರಿ ಪ್ರತಿಭಾವಂತ

ಧಾರವಾಡ
ನವಲಗುಂದ ತಾಲೂಕಿನ ಅಣ್ಣಿಗೇರಿ
ಸಿದ್ದಲಿಂಗಪ್ಪ ಪೂಜಾರ ಯುಪಿಎಸಸಿ ಪರೀಕ್ಷೆಯಲ್ಲಿ 589 ನೇ rank ಪಡೆದು ಸಾಧನೆ ಮಾಡಿದ್ದಾರೆ.

ತಂದೆ ಕಂಡಕ್ಟರ್ ಕೆಲಸ ಮಾಡಿಕೊಂಡು ಮಗನ ಓದಿಗೆ ಸಾಕಷ್ಟು ಶ್ರಮಿಸಿದ್ದಾರೆ.

ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಉದ್ಯೋಗ ಮಾಡಿಕೊಂಡಿರುವ ಸಿದ್ದ ಲಿಂಗಪ್ಪ ಪೂಜಾರ ಹೆಮ್ಮೆಯ ಸಾಧನೆ ಮಾಡಿ ತೋರಿಸಿದ್ದು, ಅವರಿಗೆ ನವಲಗುಂದ ಶಾಸಕ ಎನ್.ಎಚ್.ಕೊನರೆಡ್ಡಿ ಅಭಿನಂದನೆ ಸಲ್ಲಿಸಿದ್ದಾರೆ.
