ಜೈಲರ್ ಇದೀಗ ಅಧೀಕ್ಷಕರಾಗಿ ಅಧಿಕಾರ ಸ್ವೀಕಾರ
ಧಾರವಾಡ
ಧಾರವಾಡ ಕೇಂದ್ರ ಕಾರಾಗೃಹದ ಜೈಲರ್ ಶರಣಬಸವ ಅವರು ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕು ಉಪಕಾರಾಗೃಹದ ಅಧೀಕ್ಷಕರಾಗಿ ಅಧಿಕಾರ ಸ್ವೀಕಾರ ಮಾಡಿದ್ರು.
ಕಾರಾಗೃಹ ಮತ್ತು ಸುಧಾರಣಾ ಸೇವೆ ಇಲಾಖೆಯಲ್ಲಿ ನೇರ ನೇಮಖಾತಿ ಮೂಲಕ ಮೆರಿಟ್ ಮೇಲೆ ಆಯ್ಕೆ ಆದ ಶರಣಬಸವ ಅವರು, ಧಾರವಾಡ ಕೇಂದ್ರ ಕಾರಾಗೃಹದಲ್ಲಿ 3 ವರೆ ವರ್ಷಗಳ ಕಾಲ ಸೇವೆ ಸಲ್ಲಿಸಿ, ಕಾರಾಗೃಹದಲ್ಲಿ ಅಮೂಲಾಗ್ರ ಬದಲಾವಣೆ ತಂದವರು.
ಜೈಲಿನ ಕೈದಿಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿ ಅವರ ಮನಪರಿವರ್ತನೆಗೆ ಹಲವಾರು ಯೋಜನೆಗಳನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಜಾರಿ ಮಾಡಿದವರು.
ಧಾರವಾಡ ಕೇಂದ್ರ ಕಾರಾಗೃಹದ ಅಧೀಕ್ಷಕರಾದ ಮರಿಗೌಡರ್ ಸರ್ ಹಾಗೂ ಸಹಾಯಕ ಅಧೀಕ್ಷಕರಾದ ಗಲ್ಲೆ ಸರ್ ಮತ್ತು ಸಿಬ್ಬಂದಿ ಹಾಗೂ ಕಚೇರಿ ಅಧಿಕಾರಿ ವೃಂದ ಒಳ್ಳೆಯ ಸಹಕಾರ ಕೊಟ್ಟಿದ್ದಾರೆ ಎಂದು ಜೈಲರ್ ಶರಣಬಸವ ಅವರು ಹೇಳಿದ್ರು.
ಹಿಂದಿನ ಅಧೀಕ್ಷಕರಾದ ನಿಂಗಪ್ಪ .ಎಂ.ಕೆಂಪಾರ ಅವರು ನವೆಂಬರ್ 30 ಕ್ಕೆ ವಯೋನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ ಹೊಸ ಅಧೀಕ್ಷಕರಾಗಿ ಶರಣಬಸವ ಅಧಿಕಾರ ಸ್ವೀಕಾರ ಮಾಡಿದ್ರು.
ನಿಂಗಪ್ಪ ಎಂ.ಕೆಂಪಾರ್ ಅವರು ಹಾಕಿಕೊಟ್ಟಿರುವ ಹಾದಿಯಲ್ಲಿ ಜೈಲಿನಲ್ಲಿ ಅಭಿವೃದ್ಧಿಯ ಜೋತೆಗೆ ಕೈದಿಗಳೊಂದಿಗೆ ಪೂರಕವಾಗಿ ನಡೆದುಕೊಂಡು ಬದಲಾವಣೆ ತರಲು ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದು ಶರಣಬಸವ ಅವರು ತಿಳಿಸಿದ್ರು.