ಜಿಲ್ಲಾಸ್ಪತ್ರೆಯಲ್ಲಿ ವಿಶ್ವ ಮಧುಮೇಹ ದಿನ ಆಚರಣೆ
ಧಾರವಾಡ
ಜಿಲ್ಲಾ ಎನ್.ಸಿ.ಡಿ ಕ್ಲಿನಿಕ್, ಜಿಲ್ಲಾ ಆಸ್ಪತ್ರೆ, ಧಾರವಾಡದಲ್ಲಿ ಇಂದು ವಿಶ್ವ ಮಧುಮೇಹ ದಿನಾಚರಣೆ ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾನ್ಯ ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಶಿವಕುಮಾರ ಮಾನಕರ ವಹಿಸಿದರು, ಮುಖ್ಯ ಅತಿಥಿಗಳಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಡಾ|| ಯಶವಂತ ಮದೀನಕರ ವಹಿಸಿದರು. ಹಾಗೆಯೇ ಅತಿಥಿಗಳಾಗಿ ಜಿಲ್ಲಾ ಸಮೀಕ್ಷಣಾಧಿಕಾರಿಳಾದ ಸುಜಾತಾ ವ್ಹೀ ಹಸವೀಮಠ ರವರು ವಹಿಸಿದರು.
ಕಾರ್ಯಕ್ರಮವನ್ನು ಪ್ರಾರ್ಥನೆಯೊಂದಿಗೆ ಚಾಲನೆ ನೀಡಿ, ಪ್ರಾಸ್ಥಾವಿಕವಾಗಿ ಮಾನ್ಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಮಾತನಾಡಿದರು. ಹಾಗೆಯೇ ಜಿಲ್ಲಾ ಸಮೀಕ್ಷಣಾಧಿಕಾರಿಗಳು ವಿಶ್ವ ಮಧುಮೇಹ ದಿನದ ಘೋಷ ವಾಕ್ಯ “ಮಧುಮೇಹ ಆರೈಕೆಗೆ ಅವಕಾಶ” ಈಗಿಲ್ಲವಾದರೆ ಮತ್ತೆ ಯಾವಾಗ? ದೊಂದಿಗೆ ಮಾತನಾಡಿದರು. ಮಧುಮೇಹ ಸಂಬಂಧಿ ಕಾಯಿಲೆ ಹರಡುವಿಕೆ ಹಾಗೂ ಅದರ ನಿಯಂತ್ರಣ ಹಾಗೂ ನಿಯಮಿತ ವ್ಯಾಯಾಮ ಹಾಗೂ ಯೋಗಾಸನಗಳಿಂದ ಕಾಯಿಲೆ ತಡೆಗಟ್ಟಬಹುದು ಎಂದು ಸಾರ್ವಜನಿಕರಿಗೆ ತಿಳಿಸಿದರು. ಕೊನೆಯದಾಗಿ ಅಧ್ಯಕ್ಷ ಭಾಷಣ ಜಿಲ್ಲಾ ಶಸ್ತ್ರ ಚಿಕಿತ್ಸಕರು ಮಾತನಾಡಿ ಆಸ್ಪತ್ರೆಯ ಸೇವೆಗಳ ಬಗ್ಗೆ ವಿವರವಾಗಿ ತಿಳಿಸಿದರು ಅವುಗಳನ್ನು ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಡಾ.ವಾಸಂತಿ ಜಿರಗಲ್, ಫಿಜಿಷಿಯನ್ ,ಎನ್.ಸಿ.ಡಿ ಕ್ಲಿನಿಕ್ ಜಿಲ್ಲಾ ಆಸ್ಪತ್ರೆ ಧಾರವಾಡ ಮತ್ತು ಜಿಲ್ಲಾ ಆಸ್ಪತ್ರೆಯ ವೈದ್ಯಾಧಿಕಾರಿಗಳು,ಶುಶ್ರೂಷಕ ಸಿಬ್ಬಂದಿ ಹಾಗೂ ಎನ್.ಸಿ.ಡಿ ಕಾರ್ಯಕ್ರಮದ ಎಲ್ಲ ಸಿಬ್ಬಂದಿಯವರು ಉಪಸ್ಥಿತರಿದ್ದರು…