ಸ್ಥಳೀಯ ಸುದ್ದಿ
ಚುನಾವಣೆ ಕಣ ರಂಗೇರಿಸಿದ ಧಣಿಗಳು
ಧಾರವಾಡ
ಧಾರವಾಡ ಗ್ರಾಮೀಣ ಶಾಸಕ ಅಮೃತ ದೇಸಾಯಿ ಭಾಷಣದ ಮೂಲಕ ಮಾಜಿ ಸಚಿವ ವಿನಯ ಕುಲಕರ್ಣಿಗೆ ಸವಾಲು ಹಾಕಿದ್ದಾರೆ.
ಧಾರವಾಡದಲ್ಲಿ ನಡೆದ ಕಾರ್ಯಕರ್ತರ ಸಂಕಲ್ಪ ಸಭೆಯಲ್ಲಿ ಮಾತನಾಡಿದ ಅವರು,
ಹಾಲು ಕುಡಿದವರೇ ಬದುಕುವುದು ಕಷ್ಟ
ವಿಷ ಕುಡಿದವರು ಬದುಕುತ್ತಾರಾ ಎಂದು ಪ್ರಶ್ನೆ ಮಾಡಿದ್ರು.
ಎಲ್ಲೋ ಕುಳಿತು ಬರುತ್ತೇನೆ ಬರುತ್ತೇನೆ ಅಂತಾ ಹೇಳುತ್ತಿದ್ದಾರೆ ಬರಲಿ ನೋಡೊಣ.
ಎಲ್ಲೋ ಕುಳಿತು ವಿಡಿಯೋ ಮಾಡಿ ಹೇಳುವುದು ಏಕೆ?
ಬಾರೋ, ನಿನಗಾಗಿಯೇ ಕಾಯುತ್ತಿದ್ದೇನೆ ಎಂದ ಶಾಸಕ ಅಮೃತ ದೇಸಾಯಿ.
ಕ್ಷೇತ್ರದಿಂದ ಹೊರಗಿರುವ ವಿನಯ ಕುಲಕರ್ಣಿಗೆ ಸವಾಲು ಹಾಕುವ ಮೂಲಕ ಗ್ರಾಮೀಣ ರಣ ಕಣ ರಂಗೇರಿಸಿದ್ದಾರೆ.
ಇತ್ತೀಚೆಗೆ ಕ್ಷೇತ್ರದ ಕಾರ್ಯಕರ್ತರಿಗೆ ವಿಡಿಯೋ ಸಂದೇಶ ರವಾನಿಸಿದ್ದ ವಿನಯ ಕುಲಕರ್ಣಿ.
ನಾನು ಧಾರವಾಡದಿಂದಲೇ ಸ್ಪರ್ಧಿಸುವೆ ಅಂದಿದ್ದ ವಿನಯ ಕುಲಕರ್ಣಿ ಅವರಿಗೆ, ಬಿಜೆಪಿ
ಸಂಕಲ್ಪ ಸಭೆ ಮೂಲಕ ಟಾಂಗ್ ಕೊಟ್ಟ ಶಾಸಕ ಅಮೃತ ದೇಸಾಯಿ.