ಗ್ರಾಮೀಣ ಭಾಗದ ಅತಿ ದೊಡ್ಡ ಸಮಸ್ಯೆ- ಪಿಎಂ, ಪ್ರೆಸಿಡೆಂಟ್, ಸೆಂಟ್ರಲ್ ಹೋಮ್ ಮಿನಿಸ್ಟರ್, ಸಿಎಂ ಬೊಮ್ಮಾಯಿ, ಗವರ್ನರ್ ಗೆಹ್ಲೋಟ್, ಹಾಗೂ ರಾಜ್ಯದ ಸಚಿವರುಗಳ ಗಮನಕ್ಕೆ………….
ಧಾರವಾಡ
ಕವಲಗೇರಿ ಗ್ರಾಮದಲ್ಲಿ ಸರ್ಕಾರಿ ಶಾಲೆ ಮುಂದೆ 157/ ಎ ಸರ್ವೆ ನಂಬರನ ಜಾಗದಲ್ಲಿ ನಡೆದಿದೆ ಅತೀಕ್ರಮಣ ಎನ್ನುವ ಆರೋಪದ ದಾಖಲಾತಿಯ ಪತ್ರ ದೇಶದ ಪ್ರಧಾನಿ ಮೋದಿ, ರಾಷ್ಟ್ರಪತಿ ರಾಮನಾಥ ಕೋವಿಂದ್, ರಾಜ್ಯದ ಸಿಎಂ ಬೊಮ್ಮಾಯಿ ಹಾಗೂ ಸಚಿವರುಗಳಿಗೆ ತಲುಪಿದೆ.
ಕೇಂದ್ರ ಗೃಹ ಸಚಿವ ಅಮೀತ್ ಶಾ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಅವರಿಗೂ ವಿಷಯ ಮುಟ್ಟಿದೆ.
ಈ ಬಗ್ಗೆ ಪವರ್ ಸಿಟಿ ನ್ಯೂಸ ಕನ್ನಡ ಬಿಗ್ ಎಕ್ಸಕ್ಲೂಸಿವ್ ನ್ಯೂಸ್ ನಿಮ್ಮ ಮುಂದೆ ತಂದಿದೆ.
ನವೆಂಬರ್ 11 ರಂದು ಕವಲಗೇರಿ ಗ್ರಾಮದ ಅತೀಕ್ರಮಣದ ಸ್ಪೀಡ್ ಪೋಸ್ಟ್ ರವಾನೆ ಆಗಿದೆ. ಇದರ ಜೋತೆಗೆ ಅಗತ್ಯ ದಾಖಲಾತಿಗಳು ಹೋಗಿವೆ.
ಧಾರವಾಡ ತಾಲೂಕಿನ ಕವಲಗೇರಿ
ಗ್ರಾಮದ ಕೆಲವರು ಈ ಜಾಗವನ್ನು ಅತೀಕ್ರಮಣ ಮಾಡಿಕೊಂಡಿದ್ದಾರೆ ಎಂದು ಗ್ರಾಮಸ್ಥರು ಜಿಲ್ಲಾಧಿಕಾರಿಗೆ ಈಗಾಗಲೇ ಪತ್ರ ಬರೆದಿದ್ದಾರೆ.
ಕನಕೂರು ಗ್ರಾಮ ಪಂಚಾಯತ್ ವ್ಯಾಪ್ತಿಗೆ ಈ ಕವಲಗೇರಿ ಗ್ರಾಮ ಬರುವುದರಿಂದ ಇದರ ಕುರಿತಾಗಿ ಅಧ್ಯಕ್ಷರಿಗೂ, ತಹಶಿಲ್ದಾರ ಅವರಿಗೂ, ತಾಲೂಕು ಪಂಚಾಯತ್ ಇಓಗೆ ಹಾಗೂ ಜಿಲ್ಲಾ ಪಂಚಾಯತ ಸಿಇಓ ಅವರಿಗೂ ಪತ್ರ ಬರೆದಿದ್ದಾರೆ ಗ್ರಾಮಸ್ಥರು…
ಅಲ್ಲದೇ ಊರಿನ ಕೆಲವೊಂದು ಮಂದಿ ಈ ವಿಚಾರವಾಗಿ ಸಹಿ ಮಾಡಿ, ದಾಖಲಾತಿಗಳನ್ನು ಸಿಎಂ ಬೊಮ್ಮಾಯಿ ಅವರಿಗೆ, ಕಂದಾಯ ಸಚಿವ ಆರ್.ಅಶೋಕಗೆ ಮತ್ತು ಪ್ರಾಥಮಿಕ ಹಾಗೂ ಪ್ರೌಢ ಶಾಲೆ ಶಿಕ್ಷಣ ಸಚಿವರಿಗೆ ಸ್ಪೀಡ್ ಪೋಸ್ಟ್ ಮಾಡಿದ್ದಾರೆ.
ಇಲ್ಲಿ ಅತೀಕ್ರಮಣ ಆಗಿದೆ ಇಲ್ಲವೋ ಎನ್ನುವುದು ತನಿಖೆಯಿಂದ ಮಾತ್ರ ಗೊತ್ತಾಗಬೇಕಿದೆ. ಅಲ್ಲಿಯವರೆಗೂ ಆರೋಪ ಆರೋಪವಾಗಿಯೇ ಇರುತ್ತೆ.
ಈ ಬಗ್ಗೆ ಜಿಲ್ಲಾಧಿಕಾರಿಗಳು ತನಿಖೆ ನಡೆಸಿ ಗ್ರಾಮಸ್ಥರಿಗೆ ಯಾವ ರೀತಿ ನ್ಯಾಯ ಒದಗಿಸಿಕೊಡತಾರೆ ನೋಡಬೇಕಿದೆ.