ಸ್ಥಳೀಯ ಸುದ್ದಿ

ಕ್ಷೇತ್ರದ ಜನರಿಗಾಗಿ 29 km ಪಾದಯಾತ್ರೆ ನಡೆಸಿದ ಮಾಜಿ ಸಚಿವರ ಪತ್ನಿ ಶಿವಲೀಲಾ ಕುಲಕರ್ಣಿ

ಧಾರವಾಡ

ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ, ಇಂದು ಧಾರವಾಡ ಗ್ರಾಮೀಣ ಕ್ಷೇತ್ರ 71, ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು, ಪದಾಧಿಕಾರಿಗಳು ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಕರೆಯ ಮೇರೆಗೆ ಪಾದಯಾತ್ರೆ ನಡೆಸಿದ್ರು.

ಶಿವಲೀಲಾ ಕುಲಕರ್ಣಿ ನೇತೃತ್ವದಲ್ಲಿ ನಡೆದ ಪಾದಯಾತ್ರೆ ಉಪ್ಪಿನಬೆಟಗೇರಿ ಗ್ರಾಮದಿಂದ ಬೆಳಿಗ್ಗೆ 7.30 ಕ್ಕೆ ಆರಂಭವಾಗಿ, ಅಮ್ಮಿನಭಾವಿ ಮೂಲಕ, ಮುರಘಾಮಠದ ಮುಂದೆ ಸಾಗಿ‌, ಧಾರವಾಡ ಜಿಲ್ಲಾಧಿಕಾರಿ ಕಚೇರಿಯನ್ನು ಸಂಜೆಯ ವೇಳೆಗೆ 4.30 ರ ಸುಮಾರಿಗೆ ತಲುಪಿತು.

ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ನ್ಯಾಯ ಕೇಳುವ ಹಾಗೆ ವಾತಾವರಣ ಇಲ್ಲಾ. ವಿನಾಕಾರಣ ಬಿಜೆಪಿ ಅವರು ಶಾಸಕರ ಸಹಿತ ಕ್ಷೇತ್ರದ ಜನರಿಗೆ ಅದರಲ್ಲೂ ಕಾಂಗ್ರೆಸನ ಮುಖಂಡರಿಗೆ ಹಾಗೂ ಕಾರ್ಯಕರ್ತರಿಗೆ ತೊಂದ್ರೆ ಕೊಡುತ್ತಿದ್ದಾರೆ. ಏನೆ ತೊಂದ್ರೆ ಕೊಟ್ಟರೂ ಸಹಿತ ನಾವೆಲ್ಲಾ ಜನರ ಮುಂದೆ ಹೋಗಿ ಚುನಾವಣೆ ಎದುರಿಸುತ್ತೇವೆ.

ಪಾದಯಾತ್ರೆ ಮುಂದಿನ ದಿನಗಳಲ್ಲಿ ಮತ್ತೆ ಮುಂದುವರೆಸುತ್ತೇವೆ ಎಂದು ಮಾಜಿ ಸಚಿವರ ಪತ್ನಿ ಶಿವಲೀಲಾ ಕುಲಕರ್ಣಿ ಹೇಳಿದ್ರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಸಿದ್ದಣ್ಣಾ ಪ್ಯಾಟಿ, ಕಲ್ಲಪ್ಪ ಪುಡಕಲಕಟ್ಟಿ,ಮಾಜಿ ಸಚಿವರ ಆಪ್ತ ಕಾರ್ಯದರ್ಶಿ ಪ್ರಶಾಂತ್ ಕೆಕರೆ, ಈಶ್ವರ ಶಿವಳ್ಳಿ, ಅರವಿಂದ ಏಗನಗೌಡ್ರ, ಚೆನ್ನಬಸಪ್ಪ ಮಟ್ಟಿ, ಇಮ್ರಾನ್ ಕಳ್ಳಿಮನಿ, ಮೊಹಿದ್ದಿನ್ ಚೌಧರಿ, ಬಸವರಾಜ ಜಾಧವ,

ಮಂಜು ಸಂಕಣ್ಣವರ, ನಾರಾಯಣ ಸುಳ್ಳದ, ರೇಣುಕಾ ಕಳ್ಳಿಮನಿ, ಗೌರಿ ನಾಡಗೌಡ, ಹೊಸಯಲ್ಲಾಪೂರದ ಗೌಡರ್, ಜಗದೀಶ ಕುಂದಗೋಳ, ಪಾರೀಶ ಪತ್ರಾವಳಿ, ಬಸವರಾಜ ತಿದಿ, ರಾಜು ಕಮತಿ, ಮೈನು ನದಾಫ, ಅಶೋಕ ದೊಡಮನಿ, ಅರ್ಜುನ ಮಾದರ, ಪರಮೇಶ್ವರ ಕಟ್ಟಿಮನಿ, ಸೈಯರಾಬಾನು ಲಾಲಮೀಯಾ, ಗುರುಪಾದಯ್ಯಾ ಇಂಡಿ, ಸುಭಾಶ ಕುರಗುಂದ, ಬಸವರಾಜ ರಾಯರೆಡ್ಡಿ, ಮೈಲಾರಗೌಡ ಪಾಟೀಲ್,ಸಿದ್ದು ಗೊಗರಿ, ಮುತ್ತು ಇಂಚಲ್, ಬಸವರಾಜ ಹೆಬ್ಬಳ್ಳಿ , ಮಡಿವಾಳಪ್ಪ ದಿಂಡಲಕೊಪ್ಪ, ಮಾಬುಲಿ ದಿಡ್ಡಿ, ರಾಚಯ್ಯಾ ಹಳ್ಳಿಗೇರಿಮಠ ಸೇರಿದಂತೆ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *