ಸ್ಥಳೀಯ ಸುದ್ದಿ

ಕೇಂದ್ರ ಕಾರಾಗೃಹದ ಅಧಿಕಾರಿಗೆ ರಾಷ್ಟ್ರಪತಿ ಪದಕ

ಬೆಂಗಳೂರು

ಕೇಂದ್ರ ಸರ್ಕಾರದಿಂದ ಪ್ರತಿ ವರ್ಷ ಕೊಡಮಾಡಲಾಗುವ ರಾಷ್ಟ್ರಪತಿಗಳ ಸೇವಾ ಪದಕಕ್ಕೆ ಈ ಸಲ ರಾಜ್ಯದ ನಾಲ್ವರು ಭಾಜನರಾಗಿದ್ದಾರೆ. ಈ ಪೈಕಿ ಧಾರವಾಡದ ಕೇಂದ್ರ ಕಾರಾಗೃಹ ಅಧಿಕಾರಿಯೊಬ್ಬರು ಈ ಸಲ ಈ ಗೌರವಕ್ಕೆ ಭಾಜರಾಗಿದ್ದು ಹೈ ಪ್ರೊಫೈಲ್ ಕೇಸಗಳ ಗಣ್ಯಾತಿ ಗಣ್ಯರು ಜೈಲು ಸೇರಿದಾಗ ಕರ್ತವ್ಯ ನಿಷ್ಠೆಯ ಭದ್ರತೆ ಒದಗಿಸಿದ ಅಧಿಕಾರಿಯವರು.

ಅವರೇ ನಮ್ಮ ಧಾರವಾಡ ಕೇಂದ್ರ ಕಾರಾಗೃಹದಲ್ಲಿ ಸಹಾಯಕ ಅಧೀಕ್ಷಕರಾಗಿ ಕಾರ್ಯನಿರ್ವಹಿಸ್ತಾ ಇರುವ ಸುನೀಲ ಗಲ್ಲೆ ಅವರು. 75ನೇ ಸ್ವಾತಂತ್ರ್ಯ ದಿನಾಚರಣೆಯ ಆಜಾದಿ ಕಾ ಅಮೃತ ಮಹೋತ್ಸವ ಅಂಗವಾಗಿ ರಾಷ್ಟ್ರಪತಿಗಳ ಸೇವಾ ಪ್ರಶಸ್ತಿ ಲಭಿಸಿದೆ‌. ಸದ್ಯ ಧಾರವಾಡ ಕೇಂದ್ರ ಕಾರಾಗೃಹದಲ್ಲಿರೋ ಇವರು ಈ ಹಿಂದೆ ಬೆಂಗಳೂರು, ಮೈಸೂರು, ಬೆಳಗಾವಿಗಳಲ್ಲಿ ಕಾರ್ಯನಿರ್ವಹಿಸಿ, ಇತ್ತೀಚೆಗೆ ಧಾರವಾಡ ಕಾರಾಗೃಹಕ್ಕೆ ವರ್ಗವಾಗಿ ಬಂದಿದ್ದಾರೆ. ಈ ಹಿಂದೆ ಇವರು ಅಂತಾರಾಷ್ಟ್ರೀಯ ಮಟ್ಟದ ಆರೋಪಿಗಳಿಗೆ ಭದ್ರತೆ ನೀಡೋ ಜೊತೆಗೆ ಜೈಲಿಗೆ ಹೋದ ಗಣ್ಯಾತಿ ಗಣ್ಯರ ಭದ್ರತೆಯಲ್ಲಿಯೂ ಸಣ್ಣದೊಂದು ಲೋಪವಾಗದಂತೆ ಕಾರ್ಯ ಮಾಡಿದ್ದಾರೆ. ಇದನ್ನೆಲ್ಲ ಪರಿಗಣಿಸಿ ಇವರ ಹೆಸರನ್ನೂ ಇಲಾಖೆಯ ಮೇಲಾಧಿಕಾರಿಗಳು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿ ಕಳುಹಿಸಿದ್ದರು‌. ಅದಕ್ಕೆ ಈಗ ಮಾನ್ಯ ದೊರೆತಿದೆ.

ಗಲ್ಲೆಯವರು 1995ರಲ್ಲಿ ಕಾರಾಗೃಹ ಇಲಾಖೆಯಲ್ಲಿ ನೇಮಕಗೊಂಡ ಅವರು, ಆರಂಭದಲ್ಲಿ ಬೆಳಗಾವಿ ಕೇಂದ್ರ ಕಾರಾಗೃಹ, ಬಳಿ 2002ರಲ್ಲಿ ಬೆಂಗಳೂರು, 2009ರಲ್ಲಿ ಮೈಸೂರು, 2017ರಲ್ಲಿ ಬೆಂಗಳೂರುಬಹಾಗಯು 2019ರಿಂದ ಧಾರವಾಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರ ಸೇವಾ ಅವಧಿಯಲ್ಲಿ ನಕಲಿ ಛಾಪಾ ಕಾಗದದ ಆರೋಪಿ ಕರಿಂ ಲಾಲ್ ತೆಲಗಿ, ಭ್ರಷ್ಟಾಚಾರ ಕೇಸ್‌ನಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಜೈಲಿಗೆ ಹೋದಾಗ ಭದ್ರತಾ ಜವಾಬ್ದಾರಿ ನೋಡಿಕೊಂಡಿದ್ದಾರೆ. ವೀರಪ್ಪನ ಸಹಚರರು ಮೈಸೂರು ಮತ್ತು ಬೆಂಗಳೂರು ಕಾರಾಗೃಹದಲ್ಲಿದ್ದಾಗ ಭದ್ರತೆ ನೋಡಿಕೊಂಡಿದ್ದರು. ಮುತ್ತಪ್ಪ ರೈ ಸಹಚರರನ್ನು ತಮಿಳನಾಡಿನಲ್ಲಿ ಬಂಧಿಸಿದ ಸೇವಾ ಹಿನ್ನೆಲೆ‌ ಇವರಿಗಿದೆ.

Related Articles

Leave a Reply

Your email address will not be published. Required fields are marked *