ಕಾನಿಪ ಧ್ವನಿ ವತಿಯಿಂದ ರಾಜ್ಯಾಧ್ಯಂತ ಹೋರಾಟಕ್ಕೆ ಕರೆ
ಬೆಂಗಳೂರು
ಧಾರವಾಡ ಜಿಲ್ಲೆಯ ಹಿರಿಯ ಪತ್ರಕರ್ತ ಹಾಗೂ B.Tv ವರದಿಗಾರರಾದ ಮೆಹಬೂಬ್ ಮುನವಳ್ಳಿ ಯವರನ್ನು ಕಳೆದ ವಾರ ಕೊಲೆ ಆರೋಪಿಗಳ ಜೊತೆ ದೂರವಾಣಿ ಸಂಪರ್ಕ ಹೊಂದಿದ್ದಾರೆ ಎಂಬ ಕಾರಣಕ್ಕೆ ಅವರನ್ನು ದಾವಣಗೆರೆ ಜಿಲ್ಲೆ ನ್ಯಾಮತಿ ಪೋಲಿಸರು ಬಂಧಿಸಿರುವುದನ್ನು ವಿರೋಧಿಸಿ ನಾಳೆಯಿಂದ ರಾಜ್ಯಾಧ್ಯಂತ ಪ್ರತಿ ತಾಲೂಕು ಹಾಗೂ ಜಿಲ್ಲಾ ಕೇಂದ್ರದಲ್ಲಿ ಕಾನಿಪ ಧ್ವನಿಯ ತಾಲೂಕು ಪದಾಧಿಕಾರಿಗಳು ತಹಶೀಲ್ದಾರ್ ಹಾಗೂ ಜಿಲ್ಲಾ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ಮುಖಾಂತರ ಈ ಘಟನೆಯನ್ನು ಖಂಡಿಸಿ ಮಾನ್ಯ ರಾಜ್ಯಪಾಲರಿಗೆ ತಲುಪುವಂತೆ ಮನವಿ ಸಲ್ಲಿಸಬೇಕೆಂದು ಈ ಮೂಲಕ ಆದೇಶಿಸುತ್ತಿದ್ದೇನೆ.
ಇದೇ ಘಟನೆಗೆ ಸಂಬಂಧಿಸಿದಂತೆ ದಿನಾಂಕ:-28/3/2023 ರಂದು ದಾವಣಗೆರೆ ನಗರದ ಡಿ.ಸಿ.ಸರ್ಕಲ್ ನಿಂದ ಮಾನ್ಯ ಐ.ಜಿ.ಪಿ.ಕಾರ್ಯಾಲಯದವರೆಗೆ ಪಾದಯಾತ್ರೆಯ ಮುಖಾಂತರ ರಾಜ್ಯ ಪದಾಧಿಕಾರಿಗಳು ಹಾಗೂ ವಿವಿಧ ಜಿಲ್ಲೆಯ ಪದಾಧಿಕಾರಿಗಳೆಲ್ಲಾ ಒಟ್ಟಾಗಿ ಸೇರಿ ಮಾನ್ಯ ದಾವಣಗೆರೆ ಐ.ಜಿ.ಪಿ. ಯವರಿಗೆ ಬಿ.TV ವರದಿಗಾರನಾದ ಮೆಹಬೂಬ್ ಮುನವಳ್ಳಿ ರವರಿಗೆ ಆದ ಅನ್ಯಾಯವನ್ನು ಪುನರ್ ಪರಿಶೀಲಿಸಿ ಸೂಕ್ತ ನ್ಯಾಯಕ್ಕಾಗಿ ಮನವಿ ಸಲ್ಲಿಸಲಾಗುವುದು.
ಬಂಗ್ಲೆ ಮಲ್ಲಿಕಾರ್ಜುನ,ರಾಜ್ಯಾಧ್ಯಕ್ಷರು,ಕಾನಿಪ ಧ್ವನಿ.ಮೋ:-9535290300