ಧಾರವಾಡ
ಕರ್ನಾಟಕ ಉಚ್ಛ ನ್ಯಾಯಾಲಯ, ಧಾರವಾಡ ಪೀಠದಲ್ಲಿ ರಾಷ್ಟ್ರೀಯ ಲೋಕ ಅದಾಲತ್ನಲ್ಲಿ 265 ಪ್ರಕರಣಗಳ ಇತ್ಯರ್ಥ
ಧಾರವಾಡ
ಕರ್ನಾಟಕ ಉಚ್ಛ ನ್ಯಾಯಾಲಯ, ಧಾರವಾಡ ಪೀಠದಲ್ಲಿ ಇಂದು (ಡಿ.18) ರಂದು ರಾಷ್ಟ್ರೀಯ ಲೋಕ ಅದಾಲತ್ನ್ನು ಕರ್ನಾಟಕ ಉಚ್ಛ ನ್ಯಾಯಾಲಯದ ಹಿರಿಯ ನ್ಯಾಯಮೂರ್ತಿಗಳಾದ ಎಸ್. ಸುನಿಲ್ ದತ್ ಯಾದವ್ ಅವರ ಮಾರ್ಗದರ್ಶನದಲ್ಲಿ ಏರ್ಪಡಿಸಲಾಗಿತ್ತು.
ಸದರಿ ಅದಾಲತ್ನಲ್ಲಿ ನ್ಯಾಯಮೂರ್ತಿಗಳಾದ ಹೇಮಂತ ಚಂದನಗೌಡರ, ರವಿ .ವಿ. ಹೊಸಮನಿ, ಎಂ.ಜಿ. ಉಮಾ, ಎಸ್. ರಾಚಯ್ಯ ಹಾಗೂ ಇವರೊಂದಿಗೆ ಲೋಕ ಅದಾಲತ್ನ ಸದಸ್ಯರುಗಳಾದ ಎಸ್.ಎಸ್. ಬಡವಡಗಿ, ಎಲ್.ಟಿ. ಮಂಟಗಣಿ, ಎಮ್.ಟಿ. ಬಂಗಿ, ಅನುರಾಧಾ ದೇಶಪಾಂಡೆ ಮತ್ತು ಎಮ್.ಸಿ. ಹುಕ್ಕೇರಿ ಈ ರೀತಿಯಾಗಿ ಒಟ್ಟು 5 ಪೀಠಗಳನ್ನು ಆಯೋಜಿಸಲಾಗಿತ್ತು.
ಸದರಿ ಅದಾಲತ್ನಲ್ಲಿ ಒಟ್ಟು 1483 ಪ್ರಕರಣಗಳನ್ನು ವಿಚಾರಣೆಗೆಂದು ಗುರುತಿಸಿಕೊಳ್ಳಲಾಗಿತ್ತು. ಆ ಪೈಕಿ ಒಟ್ಟು 265 ಪ್ರಕರಣಗಳನ್ನು ರೂ.3,96,91,250/- ಮೊತ್ತಕ್ಕೆ ಇತ್ಯರ್ಥಪಡಿಸಲಾಯಿತು ಎಂದು ನ್ಯಾಯಾಂಗ ಅಧೀಕ ವಿಲೇಖನಾಧಿಕಾರಿಗಳು ಮತ್ತು ಉಚ್ಛ ನ್ಯಾಯಾಲಯ ಕಾನೂನು ಸೇವಾ ಸಮಿತಿ ಕಾರ್ಯದರ್ಶಿ ಜೈಶಂಕರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.