ಧಾರವಾಡ
ಕರ್ತವ್ಯದಲ್ಲೂ ಮಾನವೀಯತೆಯ ಕೆಲಸ
ಧಾರವಾಡ
ಜಾತ್ರೆ ಅಂದ್ರೆ ಹಾಗೆ ಭಕ್ತರ ಜನಜುಂಗುಳಿ ಇರುವುದು ಸಾಮಾನ್ಯ.
ಈ ಜಾತ್ರೆಗಳಿಗೆ ಬೀಗಿ ಪೊಲೀಸ್ ಬಂದೋಬಸ್ತ್ ಕೂಡ ಇರುತ್ತದೆ.
ಇಂತಹ ದೊಡ್ಡ ಜಾತ್ರೆಗಳಲ್ಲಿ ಧಾರವಾಡದ ಮುರಘಾಮಠದ ಜಾತ್ರೆಯೂ ಕೂಡ ಒಂದು.
ಈ ಜಾತ್ರೆಗಳಲ್ಲಿ ತಾಯಂದಿರು ತಮ್ಮ ಮಕ್ಕಳನ್ನು ಕಳೆದುಕೊಳ್ಳುವುದು ಕೆಲವೊಂದು ಕಡೆಗಳಲ್ಲಿ ಆಗಿರುತ್ತವೆ.
ಧಾರವಾಡದಲ್ಲಿಯೂ ಕೂಡ ಇಂತಹದೊಂದು ಘಟನೆ ನಡೆದಿದೆ.
ಮುರಘಾಮಾಠದ ಜಾತ್ರೆಯಲ್ಲಿ ಕಳೆದುಕೊಂಡಿದ್ದ ಮಗುವನ್ನು ತಾಯಿ ಹತ್ತಿರ ಮಹಿಳಾ ಪೊಲೀಸ್ ಅಧಿಕಾರಿ ಸುರಕ್ಷಿತವಾಗಿ ತಲುಪಿಸಿದ್ದಾರೆ.
ತಾಯಿಯಿಂದ ದೂರವಾಗಿದ್ದ ಮಗುವನ್ನು ಎತ್ತಿಕೊಂಡು, ಮತ್ತೆ ತಾಯಿ ಹತ್ತಿರ ಮಗು ಸೇರಿಸಲು ಉಪನಗರ ಪೊಲೀಸ್ ಠಾಣೆ ಮಹಿಳಾ ಅಧಿಕಾರಿ ಮೆಚ್ಚುಗೆಯ ಕೆಲಸ ಮಾಡಿದ್ದಾರೆ.
ಅವರರು ಬೇರೆ ಯಾರೂ ಅಲ್ಲಾ, ಧಾರವಾಡ ಉಪನಗರ ಪೊಲೀಸ ಠಾಣೆ ಎಎಸ್ಐ ಶ್ರೀಮತಿ ನಾಗರತ್ನಾ ಮೂಳೆ.
ಇವರ ಈ ಮಾನವೀಯತೆಯ ಕಾರ್ಯಕ್ಕೆ ಪ್ರಶಂಸೆ ಹಾಗೂ ಮೆಚ್ವುಗೆಯ ಮಾತುಗಳು ಕೇಳಿಬರುತ್ತಿವೆ.
ನಮ್ಮ ಪವರ್ ಸಿಟಿ ನ್ಯೂಸ್ ಕನ್ನಡದ ತಂಡದಿಂದಲೂ ಕೂಡ ಮಹಿಳಾ ಅಧಿಕಾರಿಗೆ ಹ್ಯಾಟ್ಸ ಆಫ್…..