ಸ್ಥಳೀಯ ಸುದ್ದಿ
ಕರಾಟೆಯಲ್ಲಿ Black ಬೆಲ್ಟ್ ಪಡೆದ ವಿದ್ಯಾರ್ಥಿನಿಗೆ ಸನ್ಮಾನಿಸಿ ಗೌರವ ಸಲ್ಲಿಕೆ
ಧಾರವಾಡ
ಕಲಘಟಗಿ ವಿಧಾನಸಭಾ ಮತ ಕ್ಷೇತ್ರದ ಕಲಘಟಗಿ ಪಟ್ಟಣದ ಅನ್ನಪೂರ್ಣ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿ ಕುಮಾರಿ ಪ್ರತಿಭಾ ಗಂಗಾಧರ ಹಿರೇಮಠ ಇವರು ಹುಬ್ಬಳ್ಳಿಯ FIF ಕರಾಟೆ ಸಂಸ್ಥೆಯಿಂದ ಬ್ಲಾಕ್ ಬೇಲ್ಟ್ ಪಡೆದು ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ಪ್ರಯುಕ್ತ ಕಾಂಗ್ರೆಸ್ ಪಕ್ಷದ ವಿಧಾನಸಭಾ ಆಕಾಂಕ್ಷಿ ಬಂಗಾರೇಶ ಹಿರೇಮಠ ರವರು ಬೆಲವಂತರ ಗ್ರಾಮದಲ್ಲಿರುವ ವಿದ್ಯಾರ್ಥಿನಿಯ ಮನೆಗೆ ತೆರಳಿ ಗೌರವ ಸನ್ಮಾನ ಮಾಡಿ ಪ್ರೋತ್ಸಾಹಿಸಿದರು.
ಈ ಸಂದರ್ಭದಲ್ಲಿ ಗಂಗಾಧರ ಹಿರೇಮಠ , ಸಿದ್ರಾಮಯ್ಯ ಹಿರೇಮಠ , ವೀರಯ್ಯ ಒದಸೋಮಠ , ಬಿ ಜಿ ಕೋಟಿ , ಬಸಯ್ಯಾ ಹಿರೇಮಠ , ಅಶೋಕ ಬುಡ್ಡಿ , ಬೈಲಪ್ಪ ತೇವಲಗೇರಿ , ಬಸವರಾಜ ಹುಡೆದ , ಸಂಗಯ್ಯ ಹಿರೇಮಠ , ಮಹಾಲಿಂಗಯ್ಯ ಹಿರೇಮಠ , ನಾಗಯ್ಯ ಹಿರೇಮಠ , ಪ್ರಶಾಂತ ಮೇಲಿನಮನಿ , ನಾಗನಗೌಡ ಪಾಟೀಲ್ ,ಮುಂತಾದವರು ಉಪಸ್ಥಿತರಿದ್ದರು