ಕಮಲ ಪಕ್ಷಕ್ಕೆ ಗುಡಬೈ ಹೇಳಿದ ಧಾರವಾಡದ ಬಿಜೆಪಿ ಯುವ ಮೋರ್ಚಾ ಮುಖಂಡ ಏಗನಗೌಡರ್
ಧಾರವಾಡ
ಬಿಜೆಪಿಯ ರಾಜ್ಯ ರೈತಮೋರ್ಚಾ ಕಾರ್ಯಕಾರಿಣಿ ಸದಸ್ಯನಾಗಿ ಕಾರ್ಯನಿರ್ವಹಿಸುತ್ತಿದ್ದ ಅರವಿಂದ ಏಗನಗೌಡರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಸುಮಾರು ಇಪತೈದು ವರ್ಷಗಳಿಂದ ಭಾರತೀಯ ಜನತಾಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ.ಹಾಗೂ ಯಾವುದೇ ಆಸೆ ಆಮಿಷಕ್ಕೊಳಗಾಗದೇ ದೇಶ,ಪಕ್ಷ,ತತ್ವ ಸಿಧ್ಧಾಂತಗಳಡಿಯಲ್ಲಿ ಕೆಲಸ ನಿರ್ವಹಿಸುತ್ತಾ,ಸಾಕಷ್ಟು ರೈತಪರ ಹೋರಾಟಕ್ಕೆ ಮುನ್ನುಡಿ ಬರೆದಿದ್ದೇನೆ,ರೈತರಿಗೆ ನ್ಯಾಯ ಒದಗಿಸಿಕೊಟ್ಟಿದ್ದೇನೆ.ಪಕ್ಷಕ್ಕಾಗಿ ಸಾಕಷ್ಟು ಕೇಸುಗಳನ್ನು ಹಾಕಿಸಿಕೊಂಡಿದ್ದೇನೆ ಹಾಗೇ ಸಾಕಷ್ಟು ಜನರ ವಿರೋಧ ಕಟ್ಟಿಕೊಂಡು,ನಾನೇ ಎದುರಿಸುತ್ತಿದ್ದೇನೆ ಎಂದವರು ಹೇಳಿದ್ದಾರೆ.
ಆದರೆ ಪಕ್ಷ ನಿಷ್ಠೆ ಇರುವ ಕಾರ್ಯಕರ್ತರಿಗೆ ಬೆಲೆ ಇಲ್ಲದಂತಾಗಿದೆ,ಕೇವಲ ತಮ್ಮ ಹಿಂಬಾಲಕರು,ಚಮಚಾಗಿರಿ ಮಾಡೋರಿಗೆ ಮಾತ್ರ ಬೆಲೆ ಇದ್ದು,ನಮ್ಮಂತ ಸಾವಿರಾರು ಕಾರ್ಯಕರ್ತರನ್ನು ಮೂಲೆಗುಂಪು ಮಾಡುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಇಲ್ಲಿಯವರೆಗೆ ನಮಗೆ ನಿರಂತರವಾಗಿ ಅವಕಾಶ ವಂಚಿತರನ್ನಾಗಿ ಮಾಡುವಲ್ಲಿ,ನಮ್ಮ ಸಂಸದರು ಮತ್ತು ಶಾಸಕರು ಯಶಸ್ವಿಯಾಗಿದ್ದಾರೆ,ಇನ್ನು ಮುಂದೆ ನಮಗೆ ಈ ಪಕ್ಷದಲ್ಲಿ ಬವಿಷ್ಯವಿಲ್ಲ ಎಂಬುದನ್ನು ಮನಗಂಡು ನಾನು ಪಕ್ಷ ಹಾಗೂ ನನ್ನ ಸ್ಥಾನಕ್ಜೆ ರಾಜೀನಾಮೆ ನೀಡುತ್ತಿದ್ದೇನೆ. ಇನ್ನೂ ಮುಂದೆಯಾದರೂ ನಮ್ಮಂತ ಸಾವಿರಾರು ಕಾರ್ಯಕರ್ತರಿಗೆ ಅನ್ಯಾಯವಾಗಬಾರದೆಂದು ನನ್ನ ಕೋರಿಕೆ,ವೇದಿಕೆಯ ಮೇಲೆ ಕಾರ್ಯಕರ್ತರಿಂದ ಪಾರ್ಟಿ ಅನ್ನುವ ನಾಯಕರು ತಮ್ಮ ಆತ್ಮಾವಲೋಕನ ಮಾಡಿಕೊಳ್ಳಬೇಕೆಂದು ಅವರು ಪಕ್ಷದ ಅಧ್ಯಕ್ಷರಿಗೆ ಸಲ್ಲಿಸಿದ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.