ಸ್ಥಳೀಯ ಸುದ್ದಿ
ಕಬಡ್ಡಿ ಆಡಿದ ಸಭಾಪತಿ ಹೊರಟ್ಟಿ, ಶಾಸಕ ಅಮೃತ ದೇಸಾಯಿ
ಧಾರವಾಡ
ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿ ಅಮೃತ ದೇಸಾಯಿ ಗೆಳೆಯರ ಬಳಗದ ವತಿಯಿಂದ ಹಮ್ಮಿಕೊಂಡಿರುವ ರಾಜ್ಯಮಟ್ಟದ ಪ್ರೊ ಕಬಡ್ಡಿ ಪಂದ್ಯಾವಳಿಗೆ ಇಂದು ಚಾಲನೆ ದೊರೆತಿದೆ.
ಸ್ವತಃ ಸಭಾಪತಿ ಬಸವರಾಜ ಹೊರಟ್ಟಿ ಹಾಗೂ ಶಾಸಕ ಅಮೃತ ದೇಸಾಯಿ ಅವರು ಕಬಡ್ಡಿ ಆಡುವ ಮೂಲಕ ಪಂದ್ಯಾವಳಿಗೆ ಚಾಲನೆ ನೀಡಿದರು.
ಮ್ಯಾಟ್ ಕಬಡ್ಡಿ ಪಂದ್ಯಾವಳಿ ಇದಾಗಿದ್ದು, ಮೈದಾನಕ್ಕೆ ನಮಸ್ಕರಿಸಿ ಕಣಕ್ಕಿಳಿದ ಹೊರಟ್ಟಿ ಅವರು ಒಂದು ವಿಕೆಟ್ ಪಡೆದು ತಮ್ಮ ಕಾಲೇಜು ದಿನಗಳನ್ನು ಮೆಲಕು ಹಾಕಿಕೊಂಡರು. ಶಾಸಕ ಅಮೃತ ದೇಸಾಯಿ ಕೂಡ ಮೈದಾನಕ್ಕಿಳಿದು ಆಟ ಆಡುವ ಮೂಲಕ ಎಲ್ಲರ ಗಮನಸೆಳೆದರು.