ಸ್ಥಳೀಯ ಸುದ್ದಿ
ಎನ್ಎಸ್ಎಸ್ ಯುವಕರ ಪಾಲಿನ ಆಶಾಕಿರಣ:ಜಿ ಬಿ ಗುಡಿಮನಿ
ಗದಗ: ಜಿಲ್ಲೆಯ ಗಜೇಂದ್ರಗಡ ಪಟ್ಟಣದ ಎಸ್ ಎಂ ಭೂಮರಡ್ಡಿ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಇಂದು ಎನ್ಎಸ್ಎಸ್ ಘಟಕದ ವತಿಯಿಂದ ಹಮ್ಮಿಕೊಳ್ಳಲಾದ ಎನ್ಎಸ್ಎಸ್ ಸ್ವಯಂಸೇವಕರಿಗೆ ಒಂದು ದಿನದ ತರಬೇತಿ ಕಾರ್ಯಕ್ರಮದಲ್ಲಿ ಪ್ರಾಚಾರ್ಯರಾದ ಜಿ ಬಿ ಗುಡಿಮನಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ ಎನ್ಎಸ್ಎಸ್ ಎಂಬುದು ಯುವಕರ ಪಾಲಿನ ಆಶಾಕಿರಣ ನಮ್ಮ ದೇಶದ ಯುವ ಶಕ್ತಿಯನ್ನು ಸಮರ್ಥವಾಗಿ ಬಳಸಿಕೊಳ್ಳಲು ಇಂತಹ ಮಹತ್ವದ ಯೋಜನೆಯನ್ನು ಜಾರಿಗೆ ತಂದರು. ವಿದ್ಯಾರ್ಥಿಗಳು ತಮ್ಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುವುದರ ಮೂಲಕ ರಾಷ್ಟ್ರ ಹಾಗೂ ಸಮಾಜದ ಸೇವೆಯನ್ನು ಮಾಡಿ ಸಮರ್ಥ ರಾಷ್ಟ್ರವನ್ನು ಕಟ್ಟುವಲ್ಲಿ ತಮ್ಮದೇ ಆದ ಕೊಡುಗೆಯನ್ನು ನೀಡಬೇಕು ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಎ ಎಸ್ ವಡ್ಡರ್, ವೈ ಆರ್ ಸಕ್ರೋಜಿ, ಕಾರ್ಯಕ್ರಮಾಧಿಕರಿ ಎಸ್ ಎಸ್ ವಾಲಿಕಾರ್, ಹಾಗೂ ಎನ್ ಎಸ್ ಎಸ್ ಸ್ವಯಂಸೇವಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.