ಸ್ಥಳೀಯ ಸುದ್ದಿ
ಉತ್ತರ ಕರ್ನಾಟಕದ ಗರಗ ಶ್ರೀಮಡಿವಾಳೇಶ್ವರ ಜಾತ್ರೆಗೆ ಚಾಲನೆ
ಧಾರವಾಡ
ನಾಡಿನ ಉತ್ತರ ಕರ್ನಾಟಕದ ಹೆಸರಾಂತ ಶ್ರೀ ಗರಗ ಗ್ರಾಮದ ಮಡಿವಾಳೇಶ್ವರ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ಭಕ್ತರ ಜಯಘೊಷದ ಮಧ್ಯೆ ನಡೆಯಿತು.
ಬೃಹತ್ ಮಹಾಪ್ರಸಾದ ವಿತರಣೆಗೆ ಶಾಸಕ ಅಮೃತ ದೇಸಾಯಿ ಚಾಲನೆ ಮನೆತನದವರು ಚಾಲನೆ ಕೊಟ್ಟರು.
ಉತ್ತರ ಕರ್ನಾಟಕದ ಐತಿಹಾಸಿಕ ಗರಗದ ಗುರು ಮಡಿವಾಳೇಶ್ವರ ಅಜ್ಜನ ಜಾತ್ರಾ ಮಹೋತ್ಸವದ ಅಂಗವಾಗಿ ಬುಧವಾರ ಮಧ್ಯಾಹ್ನ ಬೃಹತ್ ಸಾರ್ವಜನಿಕ ಅನ್ನ ಸಂತಪರ್ಣೆ ಕಾರ್ಯಕ್ರಮವೂ ನಡೆಯಿತು.
ಧಾರವಾಡ ಶಾಸಕರಾದ ಅಮೃತ ದೇಸಾಯಿ ಹಾಗೂ ಕುಟುಂಬ ಸದಸ್ಯರು ವಿಶೇಷ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.
ಉಪ್ಪಿನ ಬೆಟಗೇರಿಯ ಶ್ರೀ ಕುಮಾರ ವಿರೂಪಾಕ್ಷ ದೇವರು ಸ್ವಾಮಿಜಿ ಸಮ್ಮುಖದಲ್ಲಿ ನಡೆದ ಅನ್ನ ಸಂತರ್ಪನೆ ಕಾರ್ಯಕ್ರಮದಲ್ಲಿ, ಶ್ರೀಮಠದ ಟ್ರಸ್ಟ್ ಕಾರ್ಯಾಧ್ಯಕ್ಷ ಅಶೋಕ ದೇಸಾಯಿ, ಪ್ರಿಯಾ ಅಮೃತ ದೇಸಾಯಿ ಹಾಗೂ ಅವರ ಕುಟುಂಬ ಸದಸ್ಯರು ಉಪಸ್ಥಿತಿರಿದ್ದರು.
ದೂರದ ಊರುಗಳಿಂದ ಜಾತ್ರೆಗೆ ಲಕ್ಷಾಂತರ ಮಂದಿ ಭಕ್ತರು ಬಂದಿದ್ದರು.