ಸ್ಥಳೀಯ ಸುದ್ದಿ
ಉಗ್ರರ ಬಂಧನದ ಹಿನ್ನೆಲೆ: ವಿಜಯಪುರ ರೈಲ್ವೆ ನಿಲ್ದಾಣದಲ್ಲಿ ಹೈ ಅಲರ್ಟ್
ವಿಜಯಪುರ
ಬೆಂಗಳೂರಿನಲ್ಲಿ ಶಂಕಿತ ಉಗ್ರರ ಬಂಧನ ಬೆನ್ನಲ್ಲೆ ಗುಮ್ಮಟನಗರಿ ಖ್ಯಾತಿಯ ವಿಜಯಪುರದಲ್ಲೂ ಬಂದೋಬಸ್ತ್ ಕೈಗೊಳ್ಳಲಾಗಿದೆ. ವಿಜಯಪುರ ನಗರದ ರೈಲ್ವೆ ನಿಲ್ದಾಣದಲ್ಲಿ ಬುಧವಾರ ಪೊಲೀಸರು ತೀವ್ರ ತಪಾಸಣೆ ಮಾಡುತ್ತಿದ್ದಾರೆ.
ಮುಂಜಾಗ್ರತಾ ಕ್ರಮವಾಗಿ ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನದಳದಿಂದ ರೈಲು ನಿಲ್ದಾಣದಲ್ಲಿ ತಪಾಸಣೆ ನಡೆಸಿದರು. ಅಲ್ಲದೇ, ಶ್ವಾನದಳದಿಂದ ಪ್ರಯಾಣಿಕರ ಬ್ಯಾಗ್‌ಗಳ ತಪಾಸಣೆ ನಡೆಸಿ, ರೈಲ್ವೆ ಪ್ಲ್ಯಾಟ್ ಫಾರ್ಮ್‌ಗಳು ತಪಾಸಣೆ ನಡೆಸಿದರು.