ರಾಜಕೀಯರಾಜ್ಯಸ್ಥಳೀಯ ಸುದ್ದಿಹುಬ್ಬಳ್ಳಿ

ಅವಳಿನಗರದಲ್ಲಿ ಭರ್ಜರಿ “ಈದ್ ಮಿಲಾದ್” ಆಚರಣೆ!

ಹುಬ್ಬಳ್ಳಿ: ಕೊವಿಡ್ -19ನಿಂದಾಗಿ ಸತತ ಎರಡು ವರ್ಷಗಳ ಕಾಲ ಅಷ್ಟಕ್ಕಷ್ಟೇ ಎನ್ನುವಂತಾಗಿದ್ದ ಹಬ್ಬ ಹರಿದಿನಗಳು ಹಾಗೂ ಜಾತ್ರಾ ಮಹೋತ್ಸವಗಳು ಈ ಬಾರಿ ಎಂದಿನ ವರ್ಷಾಚರಣೆಯಂತೆ ಸಂಭ್ರಮ ಸಡಗರದಿಂದ ಆಚರಣೆಗಳು ಮುಂದುವರೆದಿವೆ.

ವಿಡಿಯೋ ಇದೆ

ಇಸ್ಲಾಂ ಧರ್ಮದ ಕೊನೆಯ ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿವಸಲ್ಲಮರ ಜನ್ಮ ದಿನಾಚರಣೆಯನ್ನು ಪ್ರತೀವರ್ಷ ಈದ್ ಮಿಲಾದ್ ಎಂಬ ಹೆಸರಿನಲ್ಲಿ ಜಗತ್ತಿನಾದ್ಯಂತ ಮುಸಲ್ಮಾನರು ಆಚರಿಸುತ್ತಾರೆ.

ಅದರಂತೆಯೆ ಈ ವರ್ಷ ಇಲ್ಲೀನ ಹಳೆ ಹುಬ್ಬಳ್ಳಿಯ ಆಸಾರ ಓಣಿಯಲ್ಲಿನ
ಇಸ್ಲಾಂ ಧರ್ಮದ ಪ್ರಮುಖ ಆಚರಣೆಗಳಲ್ಲಿ ಒಂದಾದ ಈದ್ ಮಿಲಾದ ಹಬ್ಬವನ್ನು ಕೇವಲ ಮುಸ್ಲಿಂ ಸಮುದಾಯದ ಜನರಷ್ಟೆ ಅಲ್ಲದೆ ಅನೇಕ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ರಾಜಕೀಯ ನಾಯಕರು ಭಾಗ ವಹಿಸುವ ಮೂಲಕ ಈದ್ ಮಿಲಾದ್ ಹಬ್ಬಕ್ಕೆ ಮೆರಗು ತಂದರು.

ಈದ್ ಮಿಲಾದ್ ಹಬ್ಬದ ಪ್ರಯುಕ್ತ ಜಿಲ್ಲಾಡಳಿತ ಮುಂಜಾಗೃತಾ ಕ್ರಮವಾಗಿ ಮಧ್ಯದ ಅಂಗಡಿಗಳನ್ನು ಒಂದು ದಿನಕ್ಕೂ ಮುನ್ನ ಬಂದ ಮಾಡಿಸಿ ಆದೇಶ ಹೊರಡಿಸಿತ್ತು. ಅವಳಿನಗರದ ಪೊಲಿಸ್ ಇಲಾಖೆಯೂ ಕೂಡ ಅಹಿತಕರ ಘಟನೆಗಳು ಸಂಭವಿಸಿದಂತೆ ತಡೆಗಟ್ಟಲು ಭಾರಿ ಪೊಲಿಸ್ ಬಿಗಿ ಬಂದೊಬಸ್ತ್ ಮಾಡಲಾಗಿತ್ತು.

ಅವಳಿನಗರದ ಸಂಪೂರ್ಣ ಮುಸಲ್ಮಾನರು “ಈದ್ ಮಿಲಾದ್” ಹಬ್ಬದ ದಿನದಂದು ಆಸಾರ ಒಣಿಯ ದರ್ಗಾಕ್ಕೆ ಭೇಟಿ ನೀಡಿ ಸಿಹಿ ಪದಾರ್ಥಗಳು ಹಾಗೂ ಹೂವು ಉದುಬತ್ತಿಗಳನ್ನ ದೇವರಿಗೆ ಸಮರ್ಪಿಸಿ ತಮ್ಮ ಕಷ್ಟ ಕಾರ್ಪಣ್ಯಗಳ ಕುರಿತು ದೇವರಲ್ಲಿ ಪ್ರಾರ್ಥಿಸುವ ದೃಶ್ಯಗಳು ಸಾಮಾನ್ಯವಾಗಿದ್ದವು.

ಮತ್ತೊಂದು ಕಡೆ ತಂಡೋಪ ತಂಡವಾಗಿ ಬರುತ್ತಿದ್ದ ರಾಜಕೀಯ ನಾಯಕರು ಹಾಗೂ ಸಮಾಜ ಸೇವಕರು ತಮ್ಮ ತಮ್ಮ ಬೆಂಬಲಿಗರೊಂದಿಗೆ ಆಗಮಿಸಿದ ದೃಶ್ಯಗಳ ನಡುವೆ ಗಣೇಶ ಪೆಟೆಯ ಸಮಾಜ ಸೇವಕ ಇರ್ಷಾದ್ ಬಳ್ಳಾರಿ ಕುದುರೆ ಏರಿ ಬರುವ ಮೂಲಕ ಸಾರ್ವಜನಿಕರ ಗಮನ ಸೆಳೆದರು.

ಒಂದು ಕಡೆ ಎ.ಎಮ್ ಹಿಂಡಸಗೇರಿಗೆ ನೂರಾರು ಬೆಂಬಲಿಗರೊಂದಿಗೆ ಆಸಾರ ಓಣಿಯತ್ತ ಆಗಮಿಸುತ್ತಿರುವ ದೃಶ್ಯ ಒಂದೆಡೆಯಾದರೆ. ಇತ್ತ ಅಂಜುಮನ್ ಸಂಸ್ಥೆಯ ಅಧ್ಯಕ್ಷ ಯೂಸುಫ್ ಸವಣೂರ ಆಗಮಿಸುವ ದೃಶ್ಯ ದ ವಿಡಿಯೋ ವೈರಲ್ ಆಗಿದೆ. ಇದೆ ವೇಳೆ. ಇದರಲ್ಲಿ ಹಿಂಡಸ್ಗೇರಿಗೆ ಕಾಂಗ್ರೆಸ್ ಮುಖಂಡ ಸದಾನಂದ ಸಾಥ್ ನೀಡಿದರೆ ಸವಣೂರಗೆ ಮೆಹ್ಮೂದ್ ಕೋಳುರ್ ಜೊತೆಯಾಗಿದ್ದರು.

ಇನ್ನೂ ದಲಿತ ಮುಖಂಡ ವಿಜಯ ಗುಂಟ್ರಾಳ್ ಕೂಡ ತಮ್ಮ ಬೆಂಬಲಿಗರೊಂದಿಗೆ ಆಗಮಿಸುವ ಮೂಲಕ ಮೆರವಣಿಗೆಯಲ್ಲಿ ಭಾಗವಹಿಸಿದರು.

ಈ ವೇಳೆ ಶಾಸಕ ಪ್ರಸಾದ್ ಅಬ್ವಯ್ಯ ತಮ್ಮ ನೂರಾರು ಬೆಂಬಲಿಗರ ನಡುವೆ ಆಸಾರ ಒಣಿಯಲ್ಲಿ ಉಪಸ್ಥಿತರಿದ್ದರು. ಇದೆ ವೇಳೆ ಪಾಲಿಕೆ ಸದಸ್ಯ ಇಕ್ಬಾಲ್ ನವಲೂರು ಹಾಗೂ ಆಸಾರ ಒಣಿಯ ಹಿರಿಯರು, ಕಮಿಟಿಯವರು ದರ್ಗಾದ ಬಳಿ ಉಳಿದು ಕೊಂಡು ಬರುವ ಭಕ್ತರಿಗೆ ಸರಿಯಾದ ವ್ಯವಸ್ಥೆ ಕಲ್ಪಿಸಿದ್ದರು.

Related Articles

Leave a Reply

Your email address will not be published. Required fields are marked *