DHARWADHubballiNAVANAGARPolitical news
ಈದ್-ಮಿಲಾದ್ ಪ್ರಯುಕ್ತ ಸರ್ವಧರ್ಮಿಯರಿಗೂ ಉಚಿತ ಆರೋಗ್ಯ ತಪಾಸಣೆ..!
Health checkup

POWERCITY NEWS : HUBBALLI-
ಹುಬ್ಬಳ್ಳಿ: ಹಬ್ಬ ಅಂದರೆ ಹೊಸ ಬಟ್ಟೆಗಳನ್ನು ಖರೀದಿಸಿ ಮನೆಯಲ್ಲಿ ಸಿಹಿ ಅಡುಗೆ ಮಾಡಿ ಸಂಭ್ರಮಿಸುವುದು ಸಹಜ. ಆದರೆ ಇಸ್ಲಾಂ ಧರ್ಮದ ಪವಿತ್ರ ಹಬ್ಬವಾಗಿರುವ ಇದ್ ಮಿಲಾದ್ ಹಬ್ಬದ ಪ್ರಯುಕ್ತವಾಗಿ ಸರ್ವಧರ್ಮದ ಜನರಿಗೆ ಉಚಿತ ಕಣ್ಣಿನ ತಪಾಸಣೆ ಮಾಡುವ ಮೂಲಕ ಮಹತ್ವದ ಸಂದೇಶಕ್ಕೆ ಸಾಕ್ಷಿಯಾಗಿದ್ದಾರೆ.

ಹೌದು.. ಹುಬ್ಬಳ್ಳಿಯ ನವನಗರದ ಮುಸ್ಲಿಂ ಜಮಾತ್ ಹಾಗೂ ವಾಸನ್ ಐ ಕೇರ್ ವತಿಯಿಂದ ಉಚಿತ ಕಣ್ಣಿನ ತಪಾಸಣೆ ಮಾಡುವ ಮೂಲಕ ಹಬ್ಬದ ಮಹತ್ವವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ಇನ್ನೂ ಕಾರ್ಯಕ್ರಮಕ್ಕೆ ಕಮೀಟಿಯ ಮುಖ್ಯಸ್ಥರು ವಿದ್ಯುಕ್ತವಾಗಿ ಚಾಲನೆ ನೀಡಿದರು.
ಇನ್ನೂ ಇಂತಹದೊಂದು ಕಾರ್ಯಕ್ರಮದ ಮೂಲಕ ಸಾವಿರಾರು ಜನರು ಕಣ್ಣಿನ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ಕಾರ್ಯಕ್ರಮವನ್ನು ಸದುಪಯೋಗ ಪಡೆಸಿಕೊಂಡಿದ್ದಾರೆ.
