ಅತ್ತ ಪರಿಷತ್ ಚುನಾವಣೆ – ಇತ್ತ ಹಸ್ತದ ಪವರಪುಲ್ ಆಪರೇಶನ್
ಧಾರವಾಡ
ಗದಗ, ಹಾವೇರಿ , ಧಾರವಾಡ ಜಿಲ್ಲೆಗಳ ವಿಧಾನ ಪರಿಷತ್ ಚುನಾವಣೆ ಕಾವು ಜೋರಾಗಿದೆ.
ಈ ಹಿನ್ನೆಲೆಯಲ್ಲಿ ಇಂದು ಕುಂದಾನಗರಿ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನಲ್ಲಿ ಕಾಂಗ್ರೆಸ ಪಕ್ಷದ ಬೃಹತ್ ಸಮಾವೇಶ ನಡೆಯಿತು.
ಸಮಾವೇಶವನ್ನು ಎಐಸಿಸಿ ನಾಯಕರಾದ ಬಿ.ಕೆ.ಹರಿಪ್ರಸಾದ ಹಾಗೂ ಮಾಜಿ ಸಚಿವರು, ರಾಜ್ಯದ ಮಾಜಿ ಕ್ಯಾಬಿನೇಟ್ ಮಂತ್ರಿ ಹಾಗೂ ಧಾರವಾಡ ಜಿಲ್ಲೆಯ ಪ್ರಭಾವಿ ಕೈ ನಾಯಕ ವಿನಯ ಕುಲಕರ್ಣಿ ಉದ್ಘಾಟಿಸಿದ್ರು.
ಕಾರ್ಯಕ್ರಮದಲ್ಲಿ ಶಾಸಕ ಪ್ರಸಾದ ಅಬಯ್ಯಾ, ಕಾಂಗ್ರೆಸ್
ಪಕ್ಷದ ಕಾರ್ಯಾಧ್ಯಕ್ಷ ಸಲೀಂ ಅಹ್ಮದ ಕೂಡ ಭಾಗಿಯಾಗಿ ಮತ ನೀಡುವಂತೆ ಮನವಿ ಮಾಡಿದ್ರು.
ಧಾರವಾಡ ಜಿಲ್ಲೆಯ ಎಲ್ಲಾ ಚುನಾಯಿತ ಜನಪ್ರತಿನಿಧಿಗಳು ಈ ಸಮಾವೇಶದಲ್ಲಿ ಪಾಲ್ಗೊಂಡಿದ್ದರು.
ಮೊದಲ ಪ್ರಾಶಸ್ರ್ಯದ ಮತಗಳನ್ನು ನೀಡುವುದರ ಮೂಲಕ ಕೈ ಅಭ್ಯರ್ಥಿ ಸಲೀಂ ಅಹ್ಮದ ಗೆಲ್ಲಿಸುವಂತೆ ಮನವಿ ಮಾಡಿದ್ರು ಕೈ ನಾಯಕರು.
ಇನ್ನು ಸಮಾವೇಶದಲ್ಲಿ ಇನ್ನೊಂದು ಬೆಳವಣಿಗೆ ನಡೆಯಿತು.
ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡು, ಗ್ರಾಮೀಣ ಭಾಗದಲ್ಲಿ ಕಮಲ ಅರಳಿಸಿದ್ದ ಪ್ರಭಾವಿ ನಾಯಕ ಅರವಿಂದ ಏಗನಗೌಡರ್ ಕಾಂಗ್ರೇಸ್ ಪಕ್ಷವನ್ನು ಅಧಿಕೃತವಾಗಿ ಸೇರಿದ್ರು. ಇವರ ಜೋತೆಗೆ ಮಂಜುನಾಥ ನಡಟ್ಟಿ ಸೇರ್ಪಡೆಯಾದ್ರು..
ಜೆಡಿಎಸ್ ಮಾಜಿ ಶಾಸಕ ಎನ್.ಎಚ್.ಕೋನರೆಡ್ಡಿ ಹಾಗೂ ಜಿಲ್ಲೆಯ ಮಾಜಿ ಸಚಿವ ಆಲ್ಕೊಡ್ ಹನುಮಂತಪ್ಪ ಈ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡರು.
ಈ ಸಮಾವೇಶದಲ್ಲಿ ಜಿಲ್ಲೆಯ ಕಾಂಗ್ರೆಸ್ ನಾಯಕರಾದ ಅನೀಲಕುಮಾರ ಪಾಟೀಲ್, ಬಸವರಾಜ ಜಾಧವ, ಭೀಮಪ್ಪ ಖಾಸಾಯಿ ಸೇರಿದಂತೆ ಧಾರವಾಡ ಗ್ರಾಮೀಣ ಮತಕ್ಷೇತ್ರ ಹಾಗೂ ಜಿಲ್ಲೆಯ ಇತರೆ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಪಾಲ್ಗೊಂಡಿದ್ದರು.