ಅಕಾಲಿಕ ಮಳೆ ಹಾನಿಗೆ ಜಿಲ್ಲೆಗೆ 8 ಕೋಟಿ ಅನುದಾನ ಬಂದಿದೆ.- ಸಚಿವ ಮುನೇನಕೊಪ್ಪ
ಧಾರವಾಡ
ಹುಬ್ಬಳ್ಳಿ – ಧಾರವಾಡ ಜಿಲ್ಲೆಯಲ್ಲಿ ಅತಿವೃಷ್ಟಿ ಹಿನ್ನೆಲೆಯಲ್ಲಿ ಇಂದು
ನೆರೆ ಪೀಡಿತ ಪ್ರದೇಶಕ್ಕೆ ಜವಳಿ, ಸಕ್ಕರೆ ಖಾತೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಭೇಟಿ ನೀಡಿದರು.
ಕುಂದಗೋಳ ತಾಲೂಕಿನ ಯರಿನಾರಾಯಣಪುರ ಗ್ರಾಮಕ್ಕೆ ಭೇಟಿ ನೀಡಿ,
ಬೆಣ್ಣೆಹಳ್ಳ ಪ್ರವಾಹಕ್ಕೆ ತುತ್ತಾದ ಪ್ರದೇಶದಲ್ಲಿ ಪರಿಶೀಲನೆ ನಡೆಸಿದ್ರು.
ಸಚಿವರು ಗ್ರಾಮದ ರೈತರಿಂದ ಅಹವಾಲು ಸ್ವೀಕಾರ ಮಾಡಿದ್ರು.
ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಮುನೇನಕೊಪ್ಪ,
ಅನಿರೀಕ್ಷಿತ ಮಳೆಯಿಂದ ರೈತರಿಗೆ ತೀವ್ರ ತೊಂದರೆಯಾಗಿದೆ.
ಸರಾಸರಿಗಿಂತ ನಾಲ್ಕೈದು ಪಟ್ಟು ಮಳೆಯಾಗಿದೆ.
ಹೀಗಾಗಿ ಅಪಾರ ಪ್ರಮಾಣದ ಮಳೆಯಾಗಿದೆ
ಕೂಡಲೇ ಹಾನಿಯ ಸಮೀಕ್ಷೆಗೆ ಸೂಚಿಸಿದ್ದೇನೆ.
ಧಾರವಾಡ ಜಿಲ್ಲೆಗೆ ರಾಜ್ಯ ಸರ್ಕಾರ 8 ಕೋಟಿ ಬಿಡುಗಡೆ ಮಾಡಿದೆ.
ತುರ್ತು ಪರಿಹಾರ ಕಾರ್ಯ ಕೈಗೊಳ್ಳಲಾಗುತ್ತಿದೆ.
ಬೆಳೆ ಪರಿಹಾರ, ಮನೆ ಪರಿಹಾರ ಬಿಡುಗಡೆಗೂ ಕ್ರಮ ಕೈಗೊಳ್ಳಲಾಗುವುದು.
ಬೆಣ್ಣೆಹಳ್ಳದಿಂದ ಆಗೋ ತೊಂದರೆ ತಪ್ಪಿಸೋಕೆ ಶಾಶ್ವತ ಪರಿಹಾರ ಕ್ರಮ ಕೈಗೊಳ್ಳಲಾಗುವುದು ಎಂದರು.
ಭೇಟಿ ವೇಳೆ
ಕುಂದಗೋಳ ಶಾಸಕಿ ಕುಸುಮಾ ಶಿವಳ್ಳಿ, ಡಿಸಿ ನಿತೇಶ್ ಪಾಟೀಲ, ಜಿಲ್ಲಾಮಟ್ಡದ ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.